ಬೆಂಗಳೂರು: ಹೀರೊ ಪ್ಯೂಚರ್ ಎನರ್ಜೀಸ್ ರಾಜ್ಯದಲ್ಲಿ ನವೀಕರಿಸಬಲ್ಲ ಇಂಧನ, ಗ್ರೀನ್ ಹೈಡೋಜೆನ್, ಹಾಗೂ ಇತರೆ ಪೂರಕ ಯೋಜನೆಗಳು ಒಳಗೊಂಡಂತೆ ₹11,000 ಕೋಟಿ ಮೊತ್ತದ ಯೋಜನೆಗಳಲ್ಲಿ ಹೂಡಿಕೆ ಮಾಡುವ ಸಂಬಂಧ ರಾಜ್ಯ ಸರ್ಕಾರದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
ಇನ್ವೆಸ್ಟ್ ಕರ್ನಾಟಕ 2025 ರೋಡ್’ಮ್ಯಾಪ್’ನ ಭಾಗವಾಗಿರುವ ಈ ಪ್ರಮುಖ ಹೂಡಿಕೆಯು ರಾಜ್ಯದಲ್ಲಿ 3,000 ಉದ್ಯೋಗಗಳನ್ನು ಸೃಷ್ಟಿಸುವ ಗುರಿ ಹೊಂದಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ MB ಪಾಟೀಲ್ ತಿಳಿಸಿದ್ದಾರೆ.