ಲಾಸ್ ಏಂಜಲೀಸ್ : ಕ್ಯಾಲಿಪೋರ್ನಿಯಾದ ಲಾಸ್ ಏಜಂಲೀಸ್‌ನ ಕಾಡಿನಲ್ಲಿ ಭೀಕರ ಕಾಡ್ಗಿಚ್ಚು ಹಬ್ಬಿದ್ದು, ಸಾವಿರಾರು ಮನೆಗಳು, ವಾಹನಗಳು ಸುಟ್ಟು ಭಸ್ಮವಾಗಿದೆ. ಜೊತೆಗೆ ಘಟನಾ ಸ್ಥಳದಿಂದ ಸುಮಾರು 30 ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸಾಂಟಾ ಮೋನಿಕಾ ಬಳಿಯ ಪೆಸಿಫಿಕ್ ಪಾಲಿಸೇಡ್ಸ್ ಪ್ರದೇಶವನ್ನು ಸಂಪೂರ್ಣವಾಗಿ ಬೆಂಕಿ ಆವರಿಸಿಕೊಂಡಿದೆ. ಮಂಗಳವಾರ ರಾತ್ರಿಯಿಂದ ಗಾಳಿ ತೀವ್ರವಾಗಿ ಬೀಸುತ್ತಿರುವುದರಿಂದ ಬೆಂಕಿ ಎಲ್ಲೆಡೆ ಹರಡುತ್ತಿದೆ ಎಂದು ತಿಳಿದುಬಂದಿದೆ.
ಸುಮಾರು 10 ಸಾವಿರ ಮನೆಗಳು ಬೆಂಕಿಯಿಂದ ಸುಟ್ಟು ಕರಕಲಾಗಿದ್ದು, 30 ಸಾವಿರ ಜನರನ್ನು ಸಂರಕ್ಷಿಸಲಾಗಿದೆ. ಯಾರಿಗೂ ಯಾವುದೇ ಗಾಯಗಳಾಗಿಲ್ಲ. ಅಗ್ನಿಶಾಮಕ ಸಿಬ್ಬಂದಿ ಮನೆ, ವಾಹನಗಳಿಗೆ ಹೊತ್ತಿಕೊಂಡ ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಸಮಾರು 200 ಎಕರೆಯಷ್ಟು ಜಾಗವನ್ನು ಕಾಡ್ಗಿಚ್ಚು ಆವರಿಸಿದೆ ಎಂದು ವರದಿಯಾಗಿದೆ.
ಇನ್ನು ರಾಜ್ಯಪಾಲ ಗೆವಿನ್ ನ್ಯೂಸೊಮ್ ಅವರು ಲಾಸ್ ಏಜಂಲೀಸ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಿದ್ದಾರೆ.