ಬೆಂಗಳೂರು: ಹೊಸವರ್ಷ 2025 ನ್ನು ಸಂಭ್ರಮಿಸಲಾಯಿತು, ಈ ನಡುವೆ ಕರ್ನಾಟಕದಲ್ಲಿ ದಾಖಲೆ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ.
2024 ರ ಡಿಸೆಂಬರ್ 31 ರಂದು ರಾಜ್ಯಾದ್ಯಂತ ಬರೋಬ್ಬರಿ 308 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿದೆ. 2023 ರ ಡಿಸೆಂಬರ್ 31 ರಂದು 193 ಕೋಟಿ ರೂ. ಮದ್ಯ ಮಾರಾಟ ಮಾಡಲಾಗಿತ್ತು. 2,92,339 ಬಿಯರ್ ಬಾಕ್ಸ್ ಮಾರಾಟದಿಂದ 57.75 ಕೋಟಿ ರೂ. ಒಟ್ಟು 7,76,042 ಬಾಕ್ಸ್ ಮದ್ಯ ಮಾರಾಟದಿಂದ 308 ಕೋಟಿ ರೂ. ಬಂದಿದೆ.
ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಡಿಸೆಂಬರ್ 28ರ ಶನಿವಾರ 408.53 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ. 4,04,998 ಕೇಸ್ ಬಿಯರ್ ಸೇರಿದಂತೆ 10,27,060 ಕೇಸ್ ಮದ್ಯ ಮಾರಾಟ ಆಗಿದೆ. ಇದರಲ್ಲಿ 80.58 ಕೋಟಿ ಮೊತ್ತದ ಬಿಯರ್ ಇದ್ದರೆ, 327,50 ಕೋಟಿ ಮೌಲ್ಯದ ಸ್ಪಿರಿಟ್ಸ್ ಮಾರಾಟವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.