ಮುಂಬೈ: ಛತ್ರಪತಿ ಶಿವಾಜಿ ಮಹಾರಾಜರ ಪೌರಾಣಿಕ ವಾಘ್ ನಖ್ ಅಥವಾ ಹುಲಿ ಉಗುರು(ವ್ಯಾಘ್ರನಖ) ಮಾದರಿ ಅಸ್ತ್ರ ಬರೊಬ್ಬರಿ 350ನೇ ವರ್ಷಗಳ ಬಳಿಕ ಭಾರತಕ್ಕೆ ಮರಳಿದೆ.
ಲಂಡನ್ ನಿಂದ ತರಿಸಲಾದ ಈ ಪುರಾತನ ಕಾಲದ ಆಯುಧಕ್ಕೆ ಬುಲೆಟ್ ಪ್ರೂಫ್ ಕವರ್ ಹಾಕಿ ತರಲಾಯಿತು. ಇದನ್ನು ಜುಲೈ 19 ರಿಂದ 7 ತಿಂಗಳ ಕಾಲ ಸತಾರಾದಲ್ಲಿರುವ ಮ್ಯೂಸಿಯಂನಲ್ಲಿ ಇರಿಸಲಾಗಿದೆ. ಮುಂಬೈಗೆ ಆಗಮಿಸಿರುವ ವಾಘ್ ನಖ್ ಅನ್ನು ಈಗ ಪಶ್ಚಿಮ ಮಹಾರಾಷ್ಟ್ರದ ಸತಾರಾಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ಅದನ್ನು ಜುಲೈ 19 ರಿಂದ ಪ್ರದರ್ಶಿಸಲಾಗುತ್ತದೆ.
1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ನನ್ನು ಸೋಲಿಸಲು ಶಿವಾಜಿ ಮಹಾರಾಜರು ಬಳಸಿದ್ದ ‘ಹುಲಿ ಉಗುರು’ ಆಯುಧವು ನವೆಂಬರ್‌ನಲ್ಲಿ ಲಂಡನ್‌ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ ಎಂದು ಹೇಳಲಾಗಿದೆ. ಈ ಹುಲಿ ಉಗುರಿನ ಆಕಾರದ ಶಿವಾಜಿಯ ಆಯುಧವನ್ನು ಲಂಡನ್ ಮ್ಯೂಸಿಯಂನಿಂದ ಮುಂಬೈಗೆ ತರಲಾಗಿದೆ. ಲಂಡನ್‌ನಿಂದ ತರಿಸಲಾದ ಆಯುಧಕ್ಕೆ ಬುಲೆಟ್ ಪ್ರೂಫ್ ಕವರ್ ಇದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ ಎಂದು ಮಹಾರಾಷ್ಟ್ರದ ನಿರ್ದೇಶಕರು.
1659ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್‌ನನ್ನು ಕೊಲ್ಲಲು ಮರಾಠಾ ಸಾಮ್ರಾಜ್ಯದ ಸಂಸ್ಥಾಪಕ ಶಿವಾಜಿ ಮಹಾರಾಜ ಬಳಸಿದ ವಾಘ್ ನಖ್ ಸತಾರಾದಲ್ಲಿಯೇ ಇತ್ತು ಎಂದು ಇತಿಹಾಸಕಾರರು ಹೇಳಿದ್ದರು. ಈ ಹೇಳಿಕೆಯನ್ನು ನಿರಾಕರಿಸಿದ ಸಚಿವರು, ಮಹಾರಾಷ್ಟ್ರಕ್ಕೆ ಲಂಡನ್ ನಿಂದ ವಾಪಾಸ್ ತರಲಾಗುತ್ತಿರುವ ವಾಘ್ ನಖ್ ಸ್ಪೂರ್ತಿದಾಯಕ ಕ್ಷಣವಾಗಿದೆ. ಅದನ್ನು ಸತಾರಾದಲ್ಲಿ ಭವ್ಯ ಸಮಾರಂಭದಲ್ಲಿ ಸ್ವಾಗತಿಸಲಾಗಿದೆ ಎಂದು ಹೇಳಿದರು.
ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಮಹಾರಾಷ್ಟ್ರಕ್ಕೆ ಶಸ್ತ್ರಾಸ್ತ್ರ ತರಲು ಸರ್ಕಾರ ಹಲವಾರು ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂಬ ಹೇಳಿಕೆಯನ್ನು ಮುಂಗಂತಿವಾರ್ ತಳ್ಳಿಹಾಕಿದ್ದಾರೆ. ಪ್ರಯಾಣ ಮತ್ತು ಒಪ್ಪಂದಕ್ಕೆ ಸಹಿ ಹಾಕಲು ವೆಚ್ಚ 14.8 ಲಕ್ಷ ರೂ. ಖರ್ಚಾಗಿದೆ.
ಲಂಡನ್‌ನಲ್ಲಿರುವ ಮ್ಯೂಸಿಯಂ ಆರಂಭದಲ್ಲಿ 1 ವರ್ಷಕ್ಕೆ ಈ ಶಸ್ತ್ರಾಸ್ತ್ರವನ್ನು ಒಪ್ಪಿಗೆ ನೀಡಿದೆ. ಆದರೆ ರಾಜ್ಯ ಸರ್ಕಾರವು ಅದನ್ನು 3 ವರ್ಷಗಳ ಕಾಲ ರಾಜ್ಯದಲ್ಲಿ ಪ್ರದರ್ಶನಕ್ಕೆ ಹಸ್ತಾಂತರಿಸುವಂತೆ ಮನವೊಲಿಸಿತು ಎಂದು ಅವರು ಹೇಳಿದ್ದಾರೆ