ಬೆಂಗಳೂರು: ಹೊಸ ವರ್ಷಕ್ಕೆ ಒಂದು ದಿನ ಮುನ್ನವೇ 37 ಐಪಿಎಸ್ ಅಧಿಕಾರಿಗಳು ಮತ್ತು 46 ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ. ಆ ಮೂಲಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಲಾಗಿದೆ. ಕೆಲ ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ಸರ್ಕಾರ ಆದೇಶ ಹೊರಡಿಸಿದೆ.
37 ಐಪಿಎಸ್ ಅಧಿಕಾರಿಗಳ ವರ್ಗಾವಣೆ:
ಕಮಲ್ ಪಂತ್: ನೇಮಕಾತಿ ವಿಭಾಗದ ಡಿಜಿಪಿ
ಅಲೋಕ್ ಕುಮಾರ್: ರಸ್ತೆ ಸುರಕ್ಷತಾ ವಿಭಾಗದ ವಿಶೇಷ ಆಯುಕ್ತ
ಸೀಮಂತ್ ಕುಮಾರ್ ಸಿಂಗ್: ಎಡಿಜಿಪಿ, ಬಿಎಂಟಿಎಫ್
ಹರಿಶೇಖರನ್: ಎಡಿಜಿಪಿ, ಹೋಂಗಾರ್ಡ್ಸ್ ಮತ್ತು ಸಿವಿಲ್ ಡಿಫೆನ್ಸ್
ನಂಜುಂಡಸ್ವಾಮಿ: ಅಗ್ನಿಶಾಮಕ ಮತ್ತು ತುರ್ತು ಸೇವೆ ಎಡಿಜಿಪಿ
ಚಂದ್ರಗುಪ್ತಾ: ಬೆಂಗಳೂರು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ
ತ್ಯಾಗರಾಜನ್: ಪೂರ್ವ ವಲಯ ಐಜಿಪಿ
ಅಮಿತ್ ಸಿಂಗ್: ಪಶ್ಚಿಮ ವಲಯ ಐಜಿಪಿ
ರವಿಕುಮಾರ್: ಇಂಟಲಿಜೆನ್ಸ್ ಡಿಐಜಿ
ಶಾಂತನು ಸಿನ್ಹಾ: ಪೊಲೀಸ್ ಉಪ ಮಹಾನಿರೀಕ್ಷಕರು
ದಿವ್ಯಾ ವಿ.ಗೋಪಿನಾಥ್: ಪೊಲೀಸ್ ಉಪ ಮಹಾನಿರೀಕ್ಷಕರು ಮತ್ತು ನಿರ್ದೇಶಕರು, ವಿಧಿವಿಜ್ಞಾನ ಪ್ರಯೋಗಾಲಯ
ಸುಧೀರ್ ಕುಮಾರ್ ರೆಡ್ಡಿ: ಪೊಲೀಸ್ ಜನರಲ್, ಅರಣ್ಯ ಕೋಶ, ಅಪರಾಧ ತನಿಖಾ ಇಲಾಖೆ
ಈ ಮೂಲಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ 37 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.