ಚಾಮರಾಜನಗರ: 3ನೇ ಕ್ಲಾಸ್ ವಿದ್ಯಾರ್ಥಿನಿಯೊಬ್ಬಳು ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ.
ಚಾಮರಾಜನಗರ ತಾಲ್ಲೂಕಿನ ಬನದಗುಪ್ಪೆ ಗ್ರಾಮದ ಲಿಂಗರಾಜು & ಶ್ರುತಿ ದಂಪತಿಯ ಪುತ್ರಿ ತೇಜಸ್ವಿನಿ (8) ಮೃತಪಟ್ಟಿದ್ದಾಳೆ. ಬಾಲಕಿ ತೇಜಸ್ವಿನಿಗೆ ಶಾಲೆಯಲ್ಲೇ ಹೃದಯಾಘಾತವಾಗಿದ್ದು, ಶಾಲಾ ಸಿಬ್ಬಂದಿ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೇ ಮಾರ್ಗ ಮಧ್ಯದಲ್ಲೇ ಬಾಲಕಿ ಕೊನೆಯುಸಿರೆಳೆದಿದ್ದಾಳೆ.!