4 ವರ್ಷದೊಳಗಿನ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಹುಷಾರ್‌ : ಈ ಔಷಧಗಳಿಗೆ ನಿಷೇಧ ಹೇರಿದ ಕೇಂದ್ರ ಸರಕಾರ

ಸಣ್ಣ ಮಕ್ಕಳಿಗೆ ಶೀತದ ಔಷಧ ನೀಡುವ ಮುನ್ನ ಎಚ್ಚರವಾಗಿರಬೇಕು. ಅನಾರೋಗ್ಯ ಸಮಸ್ಯೆ ಎದುರಾದಾಗ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು. ಅದ್ರಲ್ಲೂ ಕೆಲವೊಂದು ಶೀತದ ಔಷಧದ ಮೇಲೆ ಕೇಂದ್ರ ಸರಕಾರ ನಿಷೇಧ ಹೇರಿದೆ. ಇಂಡಿಯನ್ ಡ್ರಗ್ ರೆಗ್ಯುಲೇಟರ್ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್  (CDSCO) ಶಿಶು ಹಾಗೂ 4 ವರ್ಷದ ಒಳಗಿನ ಮಕ್ಕಳಿಗೆ ನೀಡಲಾಗುತ್ತಿರುವ ಶೀತ ವಿರೋಧಿ ಕಾಕ್ಟೈಲ್ ಔಷಧ ಸಂಯೋಜನೆಯ ಮೇಲೆ ನಿಷೇಧ ಹೇರಿದೆ. ಅಲ್ಲದೇ ಅದಕ್ಕೆ ಅನುಗುಣವಾಗಿ ಔಷಧಿಗಳನ್ನು ಲೇಬಲ್‌ ಮಾಡಬೇಕು ಎಂದು ಆದೇಶಿಸಿದೆ.

ಇಂಡಿಯನ್ ಡ್ರಗ್ ರೆಗ್ಯುಲೇಟರ್ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ಕಡ್ಡಾಯವಾಗಿ ಇಂತಹ ಔಷಧಗಳನ್ನು ನೀಡಬಾರದು ಎಂದಿದೆ. ಅಲ್ಲದೇ ತಜ್ಞರ ಸಮಿತಿ ಕೂಡ ಈ ನಿರ್ಧಾರವನ್ನು ಶಿಫಾರಸು ಮಾಡಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.

ಸ್ತುತ ಮಕ್ಕಳಿಗೆ ನೀಡಲಾಗುತ್ತಿರುವ ಔಷಧ ಕ್ಲೋರ್‌ಫೆನಿರಮೈನ್ ಮೆಲೇಟ್ ಮತ್ತು ಫಿನೈಲ್‌ಫ್ರಿನ್ ಎಂಬ ಎರಡು ಔಷಧಿಗಳ ಸಮ್ಮಿಶ್ರಣವಾಗಿದೆ. ಇದನ್ನು ನಾಲ್ಕು ವರ್ಷಕ್ಕಿಂತ ಕಡಿಮೆ ಮಕ್ಕಳಿಗೆ ನೀಡಬಾರದು. ಜೂನ್ 6, 2023 ರಂದು SEC ನ ಶಿಫಾರಸಿನ ನಂತರ, ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಮುಖ್ಯಸ್ಥ ರಾಜೀವ್ ಸಿಂಗ್ ರಘುವಂಶಿ ಅವರು ಈ ಕುರಿತು ಡಿಸೆಂಬರ್ 18 ರಂದು ಆದೇಶ ಹೊರಡಿಸಿದ್ದಾರೆ.

Advertisement

ಕ್ಲೋರ್ಫೆನಿರಮೈನ್ ಮೆಲೇಟ್ IP 2mg ಹೊಂದಿರುವ ಸಾಮಾನ್ಯ ಶೀತದ ಸ್ಥಿರ-ಡೋಸ್ ಸಂಯೋಜನೆಯ (FDC), ಫೀನೈಲ್ಫ್ರಿನ್ HCL IP 5 mg ಪ್ರತಿ ಮಿಲಿ ಹನಿಗಳು ಲೇಬಲ್‌ ಹಾಗೂ ಪ್ಯಾಕೇಟ್‌ ಮೇಲೆ ಎಚ್ಚರಿಕೆಯನ್ನು ನಮೂದಿಸುವಂತೆ ಸೂಚಿಸಿವೆ. ಎಫ್‌ಡಿಸಿ ಆಫ್‌ Chlorpheniramine Maleate IP 2mg Phenylephrine HCI IP 5mg ಡ್ರಾಪ್/ml ಬಳಕೆ ಮಾಡದಂತೆ ಪ್ರೊ. ಕೊಕಾಟೆ ಸಮಿತಿ ಸೂಚಿಸಿದೆ. ಮಕ್ಕಳಿಗೆ ಅನುಮೋದನೆಗೆ ಒಳಪಟ್ಟಿರದ ಶೀತ ವಿರೋಧಿ ಔಷಧಗಳನ್ನು ನೀಡುವುದು ಕಳವಳಕಾರಿ ಎಂದು ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ. ಕ್ಲೋರ್‌ಫೆನಿರಮೈನ್ ಮಲೇಟ್ IP 2mg ಫೀನೈಲ್‌ಫ್ರಿನ್ HCL IP 5mg ಡ್ರಾಪ್/ml ನ FDC ಬಳಕೆಯನ್ನು ಸಮಿತಿಯ ಮುಂದೆ ಚರ್ಚಿಸಲಾಗಿದೆ. 4 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಎಫ್‌ಡಿಸಿಯನ್ನು ಬಳಸಬಾರದು ಎಂದು ಸಮಿತಿ ಶಿಫಾರಸು ಮಾಡಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement