ನಟಿಯಾಗಿ, ರಾಜಕಾರಣಿಯಾಗಿ ಗುರುತಿಸಿಕೊಂಡಿರುವ ಭಾವನಾ ಅವರು ಸಿಂಗಲ್ ಆಗಿ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಇದೀಗ ಅವರು ತಾಯಿಯಾಗುತ್ತಿರುವ ವಿಚಾರ ಚಲನಚಿತ್ರರಂಗಕ್ಕೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಶಾಕ್ ಆಗಿದೆ.
ನಲ್ವತ್ತು ವಯಸ್ಸಿನ ಇವರು ಇದೀಗ ಏಳು ಏಳು ತಿಂಗಳ ಗರ್ಭಿಣಿಯಾಗಿದ್ದು ಶೀಘ್ರದಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಇವರು ಐವಿಎಫ್ ಮುಖೇನ ಮಗು ಪಡೆಯುತ್ತಿದ್ದು ತನ್ನ ಗರ್ಭದಲ್ಲೇ ಮಗು ಹೆರುತ್ತಿದ್ದಾರೆ.
ಭರತನಾಟ್ಯ ಕಲಾವಿದೆಯಾಗಿ ಫಿಟ್ ಆಗಿರುವ ಇವರು ಇದೀಗ ಮುಂದುವರೆದ ವೈದ್ಯಕೀಯ ತಂತ್ರಜ್ಞಾನದ ಮುಖೇನ ಪುರುಷನ ಸಂಪರ್ಕವಿಲ್ಲದೆ ಗರ್ಭಿಣಿಯಾಗಿದ್ದಾರೆ.