4,000 ನರ್ಸಿಂಗ್ ಅಧಿಕಾರಿ ಹುದ್ದೆಗಳ ನೇಮಕಾತಿ ಅರ್ಜಿ

ಕೇಂದ್ರ ಸರ್ಕಾರದ ಅಧೀನದಲ್ಲಿರುವ ದೇಶದ ಎಲ್ಲಾ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ (AIIMS) ಖಾಲಿ ಇರುವ ನರ್ಸಿಂಗ್ ಅಧಿಕಾರಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ದೆಹಲಿ ಏಮ್ಸ್ ಅಧಿಸೂಚನೆ ಪ್ರಕಟಿಸಿ ಅರ್ಜಿ ಆಹ್ವಾನಿಸಿದೆ.

ದೇಶಾದ್ಯಂತ ಇರುವ ವಿವಿಧ ಏಮ್ಸ್ ಸಂಸ್ಥೆಗಳಲ್ಲಿ ಒಟ್ಟು ನಿರೀಕ್ಷಿತ 3,500 ದಿಂದ 4,000 ಹುದ್ದೆಗಳನ್ನು ನೇಮಕಾತಿ  ಮಾಡಿಕೊಳ್ಳಲು ಏಮ್ಸ್ ಸಂಸ್ಥೆಯು ಮುಂದಾಗಿದೆ.

ಈ ನೇಮಕಾತಿಗೆ ಅರ್ಜಿ ಸಲ್ಲಿಸಲು ಅರ್ಹತೆಗಳು, ವಯೋಮಿತಿ ಅರ್ಹತೆಗಳು, ಆಯ್ಕೆಯಾದವರೆಗೆ ಸಿಗುವ ವೇತನ ಹಾಗೂ ಈ ನೇಮಕಾತಿಯ ಇನ್ನಿತರೆ  ಮಾಹಿತಿಗಳನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದ್ದು ನರ್ಸಿಂಗ್ ಪದವಿ ಮುಗಿಸಿರುವವರು ಇದರ ಸದ್ಬಳಕೆ ಮಾಡಿಕೊಳ್ಳಿ.

Advertisement

 ನೇಮಕಾತಿ ವಿವರ : 

ನೇಮಕಾತಿ ಸಂಸ್ಥೆ – All India Institute of Medical Science, Delhi • ಹುದ್ದೆಗಳ ಸಂಖ್ಯೆ – 4,000• ನೇಮಕಾತಿ ಸ್ಥಳ – All India

ಹುದ್ದೆಗಳ ವಿವರ: ನೇಮಕಾತಿ ಮಾಡಿಕೊಳ್ಳುತ್ತಿರುವ 4000 ಹುದ್ದೆಗಳಲ್ಲಿ ಶೇಕಡ 80% ರಷ್ಟು ಹುದ್ದೆಗಳನ್ನು ಅರ್ಹತೆ ಇರುವ ಮಹಿಳೆಯರಿಗಾಗಿ ಮೀಸಲಿಡಲಾಗಿದ್ದು, ಉಳಿದ ಶೇಕಡ 20ರಷ್ಟು ಹುದ್ದೆಗಳನ್ನು ಪುರುಷರಿಗಾಗಿ ಮೀಸಲಿಡಲಾಗಿದೆ.

ನರ್ಸಿಂಗ್ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆಗಳು :

B. Sc Nursing ಪದವಿ, PB B. Sc ಪದವಿ ಮುಗಿಸಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯಾ ರಾಜ್ಯ ಅಥವಾ ಭಾರತೀಯ ನರ್ಸಿಂಗ್ ಕೌನ್ಸಿಲ್ ನಿಂದ ನೋಂದಣಿ ಮಾಡಿಸಿಕೊಂಡಿರುವುದು ಕಡ್ಡಾಯವಾಗಿರುತ್ತದೆ.

Age limit-ವಯೋಮಿತಿ- ಕನಿಷ್ಠ 18ರಿಂದ ಗರಿಷ್ಠ 30 ವರ್ಷದ ವಯೋಮಿತಿ ನಿಗದಿಪಡಿಸಲಾಗಿದ್ದು ಮೀಸಲಾತಿ ವರ್ಗಗಳ ಅಡಿಯಲ್ಲಿ ಬರುವವರಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ನಿಗದಿಪಡಿಸಲಾಗಿದೆ.

AIIMS Nursing Officer Recruitment 2024 – ಆಯ್ಕೆಯಾಗುವ ನರ್ಸಿಂಗ್ ಅಧಿಕಾರಿಗಳಿಗೆ ಸಿಗುವ ವೇತನ – ₹34,800 ರೂ. ವರೆಗೆ ಅಭ್ಯರ್ಥಿಗಳನ್ನು ಹೇಗೆ ಆಯ್ಕೆ ಮಾಡಿಕೊಳ್ಳಲಾಗುವುದು?

ನರ್ಸಿಂಗ್ ಆಫೀಸರ್ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಸಾಮಾನ್ಯ ಅರ್ಹತಾ ಪರೀಕ್ಷೆಯನ್ನು  (NORCET), ಕಂಪ್ಯೂಟರ್ ಆಧರಿತ ಪರೀಕ್ಷೆ ಮುಖಾಂತರ ಎರಡು ಹಂತದಲ್ಲಿ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಪರೀಕ್ಷೆಯ ಪ್ರಮುಖ ದಿನಾಂಕಗಳು ಈ ಕೆಳಗಿನಂತಿರುತ್ತದೆ.

• ಪೂರ್ವಭಾವಿ ಪರೀಕ್ಷೆ – 15 ಸೆಪ್ಟೆಂಬರ್ 2024• ಮುಖ್ಯ ಪರೀಕ್ಷೆ – 04 ಅಕ್ಟೋಬರ್ 2024

Application fee-ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಈ ಕೆಳಗಿನಂತೆ ಅರ್ಜಿ ಶುಲ್ಕ ಪಾವತಿಸಬೇಕು :

• ಸಾಮಾನ್ಯ ವರ್ಗದ ಅಭ್ಯರ್ಥಿಗಳು ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳು ₹3,000 ರೂ. ಅರ್ಜಿ ಶುಲ್ಕ ಪಾವತಿಸಬೇಕು.• ಪರಿಶಿಷ್ಟ ವರ್ಗಗಳ ಅಭ್ಯರ್ಥಿಗಳು ಹಾಗೂ ಆರ್ಥಿಕವಾಗಿ ಹಿಂದುಳಿದವರು ₹2,400 ರೂ. ಪಾವತಿಸಬೇಕು.• ಅಂಗವಿಕಲ ಅಭ್ಯರ್ಥಿಗಳು ಉಚಿತವಾಗಿ ಅರ್ಜಿ ಸಲ್ಲಿಸಲು ಅವಕಾಶವಿದೆ.

ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕಗಳು : 

• ಅರ್ಜಿ ಸಲ್ಲಿಕೆ ಆರಂಭವಾದ ದಿನಾಂಕ – 01 ಆಗಸ್ಟ್ 2024• ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ – 21 ಆಗಸ್ಟ್ 2024

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement