ಕೇರಳ ಸೆಪ್ಟೆಂಬರ್ 08: ಶಬರಿಮಲೆ ಎಲ್ಲಾ ಧರ್ಮದವರಿಗೂ ತೆರೆದಿರುವಂತಹ ದೇವಾಲಯ. ಇತರ ಧರ್ಮದವರೂ ಶಬರಿಮಲೆ ಯಾತ್ರೆಯನ್ನು ಕೈಗೊಳ್ಳುತ್ತಾರೆ. ಸಾಮಾನ್ಯ ಜನರು ಕೈಗೊಳ್ಳುವ ಶಬರಿಮಲೆ ಯಾತ್ರೆಯನ್ನು ಈ ಬಾರಿ ಕ್ರೈಸ್ತ ಧರ್ಮದ ಪಾದ್ರಿಯೊಬ್ಬರು ಕೈಗೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಆಂಗ್ಲಿಕನ್ ಪಾದ್ರಿ ಫಾದರ್ ಡಾ.ಮನೋಜ್ ಅವರು 41 ದಿನಗಳ ಉಪವಾಸದ ನಂತರ ಶಬರಿಮಲೆ ಯಾತ್ರೆ ಕೈಗೊಳ್ಳಲು ಸಜ್ಜಾಗಿದ್ದಾರೆ. ಚರ್ಚ್ ಆಫ್ ಸೌತ್ ಇಂಡಿಯಾ (CSI) ಸಮುದಾಯದಲ್ಲಿ ಜನಿಸಿದ ಫಾದರ್ ಮನೋಜ್ ಅವರು 2010 ರಲ್ಲಿ ಆಂಗ್ಲಿಕನ್ ಚರ್ಚ್‌ನಲ್ಲಿ ಪಾದ್ರಿಯಾಗಿ ದೀಕ್ಷೆ ಪಡೆದರು. ಬಳಿಕ ಪಿಎಚ್‌ಡಿ ಮಾಡಿದ್ದಾರೆ. ಬೆಂಗಳೂರಿನ ಖಾಯಂ ನಿವಾಸಿ ಫಾ. ಮನೋಜ್ 27 ವರ್ಷಗಳಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದಾರೆ.