ಪುರಿಯ ಜಗನ್ನಾಥ ದೇವಾಲಯದ ರತ್ನ ಭಂಡಾರವನ್ನು 46 ವರ್ಷಗಳ ಹಿಂದೆ ಅಂದ್ರೆ 1978ರಲ್ಲಿ ಕೊನೆಯ ಬಾರಿಗೆ ತೆರೆಯಲಾಯಿತ್ತು. ಇದೀಗ ಭಾನುವಾರದಂದು ಪುನಃ ತೆರೆಯಲಾಯಿತು. 1978ರಲ್ಲಿ 128.380 ಕೆಜಿ ತೂಕದ 454 ಚಿನ್ನದ ವಸ್ತುಗಳು ಮತ್ತು 221.530 ಕೆಜಿ ತೂಕದ 293 ಬೆಳ್ಳಿ ವಸ್ತುಗಳು ಖಜಾನೆಯ ಎರಡೂ ಕೋಣೆಗಳಲ್ಲಿ ಕಂಡುಬಂದಿದ್ದವು. 1978ರ ನಂತರ, ಒಳ ಕೋಣೆಯನ್ನು ಒಂದೆರಡು ಬಾರಿ ತೆರೆಯಲಾಗಿತ್ತಾದರೂ ಯಾವುದೇ ಆಡಿಟ್ ಮಾಡಲಾಗಿಲ್ಲ. ಬರೋಬ್ಬರಿ 46 ವರ್ಷಗಳ ನಂತರ ರಾಜ್ಯ ಬಿಜೆಪಿ ಸರ್ಕಾರ ರತ್ನ ಖಚಿತ ಭಂಡಾರದ ಕೋಣೆಯ ಬಾಗಿಲುಗಳನ್ನು ಭಾನುವಾರ ಸುಮಾರು ಮಧ್ಯಾಹ್ನ 1.48ರ ಶುಭ ಮೂಹರ್ತದಲ್ಲಿ ಓಪನ್ ಮಾಡಿದೆ. ಪುರಿ ಜಗನ್ನಾಥ ದೇವಾಲಯದ ರತ್ನ ಭಂಡಾರ ಕೋಣೆಯ 4 ಬಾಗಿಲುಗಳನ್ನ ದೇವಾಲಯ ಸಮಿತಿಯ 16 ಸದಸ್ಯರು, ಸಾಂಪ್ರಾದಾಯಿಕ ಉಡುಗೆ ತೊಟ್ಟು, ಪೂಜೆ ಸಲ್ಲಿಸಿ ಓಪನ್ ಮಾಡಿದ್ದಾರೆ. ದೇವಾಲಯ ಸಮಿತಿಯ ಸದಸ್ಯರಿಗೆ ರತ್ನ ಭಂಡಾರದ ಬಾಗಿಲನ್ನು ಕೀಲಿ ಕೈಯಿಂದ ತೆರೆಯಲು ಸಾಧ್ಯವಾಗಲಿಲ್ಲ. ಹೀಗಾಗಿ, ಕಟರ್ ಬಳಸಿ ಓಪನ್ ಮಾಡಲಾಗಿದೆ. ರತ್ನ ಭಂಡಾರದ ಬಾಗಿಲು ತೆರೆಯುತ್ತಿದ್ದಂತೆ ಸ್ಥಳದಲ್ಲಿದ್ದ SP ಪಿನಾಕ್ ಮಿರ್ಶಾ ಅವರು ಮೂರ್ಛೆ ಹೋಗಿದ್ದು ಸೂಕ್ತ ಚಿಕಿತ್ಸೆ ನೀಡಲಾಗಿದೆ. ಪುರಿ ಜಗನ್ನಾಥ ಸನ್ನಿಧಿಯಲ್ಲಿ ಅಧಿಕಾರಿಗಳಿಗೆ ಕಂಡ ರತ್ನ ಭಂಡಾರದ ಬಗ್ಗೆ ಹಾಗೂ ರಹಸ್ಯ ಕೋಣೆಯ ಬಗ್ಗೆ ಸಾಕಷ್ಟು ಕುತೂಹಲಕಾರಿ ಅಂಶಗಳು ಬೆಳಕಿಗೆ ಬಂದಿವೆ.