ಅಹಮದಾಬಾದ್: ಕೇಂದ್ರ ಸಚಿವ ಅಮಿತ್ ಶಾ ಶುಕ್ರವಾರ ಗಾಂಧಿನಗರ ಜಿಲ್ಲಾ ಚುನಾವಣಾಧಿಕಾರಿ ಎದುರು ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನಾಮನಿರ್ದೇಶನದಲ್ಲಿ, ಮಾಜಿ ಬಿಜೆಪಿ ಅಧ್ಯಕ್ಷ ಮತ್ತು ಮೋದಿ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಅಮಿತ್ ಶಾ ಅವರು 2024ರಲ್ಲಿ ತಮ್ಮ ಒಟ್ಟು ಆಸ್ತಿಯನ್ನು ಮೌಲ್ಯವು 36 ಕೋಟಿ ರೂಪಾಯಿ ಎಂದು ಘೋಷಿಸಿದ್ದಾರೆ. ಶಾ ಅವರ ಅಫಿಡವಿಟ್ ಪ್ರಕಾರ, ಅವರು ಸ್ವಂತ ಕಾರು ಹೊಂದಿಲ್ಲ ಮತ್ತು ಕೇವಲ 24,000 ನಗದು ರೂಪದಲ್ಲಿ ಘೋಷಿಸಿದ್ದಾರೆ. 20 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 16 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಶಾ ಬಹಿರಂಗಪಡಿಸಿದ್ದಾರೆ. ಅವರ ಘೋಷಿತ ಚಿನ್ನಾಭರಣ ಮೌಲ್ಯ 72 ಲಕ್ಷ, ಪತ್ನಿ ಬಳಿ 1.10 ಕೋಟಿ ಮೌಲ್ಯದ ಚಿನ್ನಾಭರಣವಿದೆ. ಅಮಿತ್ ಶಾ ಅವರ ಪತ್ನಿ ಸೋನಾಲ್ ಶಾ ಅವರು 31 ಕೋಟಿ ರೂಪಾಯಿಗೂ ಅಧಿಕ ಆಸ್ತಿ ಹೊಂದಿದ್ದು, 22.46 ಕೋಟಿ ಮೌಲ್ಯದ ಚರ ಆಸ್ತಿ ಮತ್ತು 9 ಕೋಟಿ ಮೌಲ್ಯದ ಸ್ಥಿರ ಆಸ್ತಿ ಹೊಂದಿದ್ದಾರೆ. ಶಾ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಶಾ ಮತ್ತು ಅವರ ಪತ್ನಿಯ ಒಟ್ಟು ಆಸ್ತಿ 65.67 ಕೋಟಿ ರೂ. ಆಗಿದೆ, 2019 ರಲ್ಲಿ, ಈ ಅಂಕಿ ಅಂಶವು ರೂ 30.49 ಕೋಟಿಗಳಷ್ಟಿತ್ತು. ಇದು ಕಳೆದ ಐದು ವರ್ಷಗಳಲ್ಲಿ ದ್ವಿಗುಣವಾಗಿದೆ ಎಂದು ಸೂಚಿಸುತ್ತದೆ. ಅಫಿಡವಿಟ್ ಪ್ರಕಾರ, ಗೃಹ ಸಚಿವರು 15.77 ಲಕ್ಷ ರೂ. ವೈಯಕ್ತಿಕ ಸಾಲ ಹೊಂದಿದ್ದರೆ, ಅವರ ಪತ್ನಿ 26.32 ಲಕ್ಷ ರೂ. ಹೊಂದಿದ್ದರು. 2022-23ರ ಆರ್ಥಿಕ ವರ್ಷದಲ್ಲಿ ಅಮಿತ್ ಶಾ ವಾರ್ಷಿಕ ಆದಾಯ 75.09 ಲಕ್ಷ ರೂ.ಗಳಾಗಿದ್ದರೆ, ಅವರ ಪತ್ನಿಯ ವಾರ್ಷಿಕ ಆದಾಯ 39.54 ಲಕ್ಷ ರೂ. ಆಗಿತ್ತು.