ನವದೆಹಲಿ : ಅಮೆರಿಕ ಮೂಲದ ಕೃತಕ ಬುದ್ಧಿಮತ್ತೆ ಕಂಪನಿ ಓಪನ್ಎಐ ಭಾರತದಲ್ಲಿ ಐದು ಲಕ್ಷ ಉಚಿತ ಚಾಟ್ಜಿಪಿಟಿ ಪ್ಲಸ್ ಖಾತೆಗಳನ್ನು ವಿತರಿಸುವುದಾಗಿ ಘೋಷಿಸಿದೆ.
ಓಪನ್ಎಐ ಇದುವರೆಗಿನ ತನ್ನ ಅತಿದೊಡ್ಡ ಶಿಕ್ಷಣ-ಕೇಂದ್ರಿತ ಉಪಕ್ರಮಗಳಲ್ಲಿ ಒಂದಾಗಿದ್ದು, ಮುಂದಿನ ಆರು ತಿಂಗಳಲ್ಲಿ ದೇಶಾದ್ಯಂತ ಆರು ತಿಂಗಳಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಐದು ಲಕ್ಷ ಉಚಿತ ಚಾಟ್ಜಿಪಿಟಿ ಖಾತೆ ಸಿಗಲಿದೆ.
ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಚಾಟ್ಜಿಪಿಟಿಯ ಪಾತ್ರವನ್ನು ವಿಸ್ತರಿಸಲು ಭಾರತ ಸರ್ಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಕೇಂದ್ರ ಸರ್ಕಾರ ಮತ್ತು ತಾಂತ್ರಿಕ ಸಂಸ್ಥೆಗಳ ಸಹಕಾರಿಂದ ಈ ಉಪಕ್ರಮ ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ಓಪನ್ಎಐ ಉಪಾಧ್ಯಕ್ಷೆ ಲಿಯಾ ಬೆಲ್ಸ್ಕಿ ಹೇಳಿದ್ದಾರೆ.
ಚಾಟ್ಜಿಪಿಟಿ ವಿಶ್ವಾದ್ಯಂತ 70 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿದ್ದು ಅತಿ ಹೆಚ್ಚು ಬಳಕೆ ಮಾಡುವ ದೇಶಗಳ ಪೈಕಿ ಭಾರತ ಮೊದಲ ಸ್ಥಾನ ಪಡೆದಿದೆ. ಚಾಟ್ಜಿಪಿಟಿ ಒಟ್ಟು ಬಳಕೆದಾರರ ಪೈಕಿ 13.5% ಭಾರತದವರಾಗಿದ್ದರೆ 8.9% ಮಂದಿ ಅಮೆರಿಕದವರಿದ್ದಾರೆ. ಮೂರನೇ ಸ್ಥಾನದಲ್ಲಿ ಇಂಡೋನೇಷ್ಯಾ (5.7%) ಇದೆ.
ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಓಪನ್ಎಐ ಈ ವರ್ಷವೇ ಭಾರತದಲ್ಲಿ ಕಚೇರಿ ತೆರೆಯುವುದಾಗಿ ಮುಖ್ಯಸ್ಥ ಸ್ಯಾಮ್ ಅಲ್ಟ್ಮನ್ ಹೇಳಿದ್ದಾರೆ.