ಜೈಪುರ್: ವರದಕ್ಷಿಣೆ ಪಡೆಯುವುದು ಹಾಗೂ ನೀಡುವುದು ಕಾನೂನಿನ ಪ್ರಕಾರ ಅಪರಾಧ ಎಂದು ಹೇಳಿದ್ರೂ ಕೂಡ ಈ ಪಿಡುಗು ದೇಶದಲ್ಲಿ ಇನ್ನು ಕೆಲವೆಡೆ ಹಾಗೇ ಇದೆ. ಇದರಿಂದ ಅದೆಷ್ಟೊ ಹೆಣ್ಣು ಮಕ್ಕಳು ತಮ್ಮ ಜೀವ, ಜೀವನ ಕಳೆದುಕೊಂಡಿದ್ದಾರೆ. ಇದೀಗ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ವರನೊಬ್ಬನಿಗೆ ವರದಕ್ಷಿಣೆಯಾಗಿ 5,51,000 ರೂ.ಗಳನ್ನು ಉಡುಗೊರೆಯಾಗಿ ನೀಡಲಾಗಿತ್ತು.
ಆದರೆ ಮದುವೆ ಕಾರ್ಯಕ್ರಮದ ನಂತರ ವರ ಹಣವನ್ನು ವಧುವಿನ ಕುಟುಂಬಕ್ಕೆ ಹಿಂದಿರುಗಿಸಿದ್ದಾನೆ ಎಂಬುದಾಗಿ ತಿಳಿದುಬಂದಿದೆ. ವರನ ಈ ಕಾರ್ಯ ಸಿಕ್ಕಾಪಟ್ಟೆ ವೈರಲ್(Viral News) ಆಗಿದೆ. ವಿಡಿಯೊ ನೋಡಿದ ನೆಟ್ಟಿಗರು ಈತ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪರಮ್‌ವೀರ್ ರಾಥೋಡ್ ಫೆಬ್ರವರಿ 14 ರಂದು ನಿಕಿತಾ ಭಾಟಿ ಎಂಬುವವಳನ್ನು ಮದುವೆಯಾಗಿದ್ದಾನೆ. ರಾಥೋಡ್ ಕುದುರೆಯ ಮೇಲೆ ಮದುವೆಗೆ ಆಗಮಿಸಿದಾಗ, ವಧುವಿನ ಕುಟುಂಬವು ಅವನಿಗೆ ಉಡುಗೊರೆಗಳನ್ನು ನೀಡಿದ್ದಾರೆ. ಅದರಲ್ಲಿ ಕೆಂಪು ಬಟ್ಟೆಯಿಂದ ಅಲಂಕರಿಸಿದ ತಟ್ಟೆಯಲ್ಲಿ 5,51,000 ರೂ.ಗಳ ವರದಕ್ಷಿಣೆ ಹಣವಿತ್ತು. ಆದರೆ ವರ ಮದುವೆ ಆಚರಣೆಗಳು ಮುಗಿದ ಬಳಿಕ ಆ ಹಣವನ್ನು ವಧುವಿಗೆ ತಂದೆತಾಯಿಗೆ ವಾಪಸ್ ನೀಡಿದ್ದಾನೆ. “ಈ ರೀತಿಯ ಆಚರಣೆಗಳಿಗೆ ವಿದ್ಯಾವಂತ ಜನರು ತಲೆಬಾಗಬಾರದು. ಸಮಾಜದಲ್ಲಿ ಬದಲಾವಣೆ ತರಬೇಕು. ಹಾಗಾಗಿ ನಾನು ಮದುವೆ ಕಾರ್ಯಕ್ರಮದ ನಂತರ ಮನೆಯವರ ಬಳಿ ಮಾತನಾಡಿ ಅವರು ನೀಡಿದ ವರದಕ್ಷಿಣೆಯನ್ನು ವಾಪಾಸ್ ನೀಡಿದ್ದೇನೆ. ನನಗೂ ಒಬ್ಬಳು ಸಹೋದರಿಯೂ ಇದ್ದಾಳೆ” ಎಂದು ಆತನ ಹೇಳಿದ್ದಾನೆ.
ರಾಥೋಡ್ ತಂದೆ ಕೂಡ ಮಗನ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಈ ವರದಕ್ಷಿಣೆ ಪದ್ಧತಿಯನ್ನು ನಿಲ್ಲಿಸಬೇಕು ಎಂದು ಅವರು ಕೂಡ ಹೇಳಿದ್ದಾರೆ.ವಧುವಿನ ಕುಟುಂಬ ಮತ್ತು ಗ್ರಾಮಸ್ಥರು ರಾಥೋಡ್ ಉತ್ತಮ ನಡವಳಿಕೆಗೆ ಕಂಡು ವರನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಕ್ಷಿಣೆಯಾಗಿ 10 ಲಕ್ಷ ರೂಪಾಯಿ ಮತ್ತು ಕಾರು ಕೊಟ್ಟಿಲ್ಲವೆಂಬ ಕಾರಣಕ್ಕೆ ಅತ್ತೆ-ಮಾವ ತಮ್ಮ ಸೊಸೆಗೆ ಬಲವಂತವಾಗಿ ಎಚ್‌ಐವಿ ಸೋಂಕಿತ ಇಂಜೆಕ್ಷನ್ ನೀಡಿ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ. ಈ ಆತಂಕಕಾರಿ ಘಟನೆಯು ಉತ್ತರಪ್ರದೇಶದ ಸಹರಾನ್‌ಪುರದಲ್ಲಿ ನಡದಿದ್ದು, ಹೆಣ್ಣಿನ ತಂದೆ ದೂರು ದಾಖಲಿಸಿದ್ದಾರೆ. ಅವರು ನೀಡಿದ ದೂರಿನ ಆಧಾರದ ಮೇಲೆ ಸ್ಥಳೀಯ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಸಹರಾನ್ಪುರ ನಿವಾಸಿಯಾಗಿದ್ದು, ಆಕೆಯ ಪತಿ, ಅತ್ತೆ ಸೇರಿ ಒಟ್ಟು ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಗಳ ಪ್ರಕಾರ, ಈ ಘಟನೆ ಮೇ 2024 ರಲ್ಲಿ ಹರಿದ್ವಾರದಲ್ಲಿರುವ ಮಹಿಳೆಯ ಅತ್ತೆಯ ಮನೆಯಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಕುರಿತು ಸಂತ್ರಸ್ತೆಯ ತಂದೆ ಮಾತನಾಡಿದ್ದು, 2023ರಲ್ಲಿ ತಮ್ಮ ಮಗಳ ಮದುವೆ ಮಾಡಿಕೊಟ್ಟಿದ್ದೆವು, ಮದುವೆಗೆ 45 ಲಕ್ಷ ರೂ. ಖರ್ಚು ಮಾಡಿದ್ದೆವು. ವರನ ಕುಟುಂಬಕ್ಕೆ 15 ಲಕ್ಷ ರೂ. ನಗದು ಹಾಗೂ ಸಬ್-ಕಾಂಪ್ಯಾಕ್ಟ್ ಎಸ್ಯುವಿ ನೀಡಿದ್ದೇವೆ, ಆದರೆ ಅವರು ಹೆಚ್ಚುವರಿಯಾಗಿ 10 ಲಕ್ಷ ರೂಪಾಯಿ ನಗದು ಮತ್ತು ದೊಡ್ಡ ಎಸ್ಯುವಿ ಕೇಳಿದ್ದಾರೆ ಎಂದು ಹೇಳಿದ್ದಾರೆ.
ಮದುವೆಯಾದ ದಿನದಿಂದಲೂ ದೈಹಿಕ ಮತ್ತು ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ, ಮಗಳನ್ನು ಅವಮಾನಿಸಿ ಮಗನಿಗೆ ಬೇರೆ ಮದುವೆ ಮಾಡುವುದಾಗಿ ಹೇಳಿದ್ದರು. ಮಾರ್ಚ್ 25, 2023ರಂದು ಆಕೆಯನ್ನು ಮನೆಯಿಂದ ಹೊರಹಾಕಿದರು. ಮೂರು ತಿಂಗಳುಗಳ ಕಾಲ ನಮ್ಮೊಂದಿಗೆ ಇದ್ದಳು. ನಂತರ ಹಿರಿಯರನ್ನು ಸೇರಿಸಿ ರಾಜಿ ಮಾಡಿ ಮತ್ತೆ ಆಕೆಯ ಗಂಡನ ಮನೆಗೆ ಕಳುಹಿಸಲಾಯಿತು. ಅಷ್ಟಾದರೂ ಅವರು ವರದಕ್ಷಿಣೆ ಕಿರುಕುಳ ನೀಡಿದರು ಎಂದು ತಿಳಿಸಿದ್ದಾರೆ.