ನವದೆಹಲಿ : ಶ್ರೀಲಂಕಾದ ಮಾಜಿ ದೇಶೀಯ ಕ್ರಿಕೆಟಿಗ ಸಾಲಿಯಾ ಸಮನ್ ಅವರಿಗೆ ಐಸಿಸಿ ಭ್ರಷ್ಟಾಚಾರ ವಿರೋಧಿ ನಿಯಮಗಳನ್ನು ಉಲ್ಲಂಘಿಸಿದ ಪ್ರಕರಣದಲ್ಲಿ ಐದು ವರ್ಷಗಳ ಕ್ರಿಕೆಟ್ ನಿಷೇಧ ವಿಧಿಸಲಾಗಿದೆ. ಈ ನಿಷೇಧ 2023ರ ಸೆಪ್ಟೆಂಬರ್ 13ರಿಂದ ಜಾರಿಗೆ ಬಂದಿದ್ದು, ಈಗಾಗಲೇ ಎರಡು ವರ್ಷಗಳ ನಿಷೇಧಾವಧಿ ಪೂರೈಕೆಯಾಗಿದೆ, ಇನ್ನುಳಿದ ಮೂರು ವರ್ಷಗಳು ಮುಂದುವರಿಯಲಿವೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ)ಯ ಭ್ರಷ್ಟಾಚಾರ ವಿರೋಧಿ ನ್ಯಾಯಮಂಡಳಿ ಈ ವಿಚಾರಣೆಯನ್ನು ನಡೆಸಿದ್ದು, 2021 ರಲ್ಲಿ ಯುಎಇನಲ್ಲಿ ನಡೆದ ಅಬುಧಾಬಿ ಟಿ10 ಲೀಗ್ ಪಂದ್ಯದ ವೇಳೆ ಸಲಿಯಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಐಸಿಸಿ ಭ್ರಷ್ಟಾಚಾರ ವಿರೋಧಿ ನ್ಯಾಯ ಮಂಡಳಿಯು ಸಮನ್ ಸೇರಿದಂತೆ ಒಟ್ಟು 8 ಮಂದಿಯನ್ನು ವಿಚಾರಣೆಗೆ ಒಳಪಡಿಸಿತ್ತು. ಅಲ್ಲದೆ ಈ ಪ್ರಕರಣದಲ್ಲಿ 8 ಮಂದಿ ಐಸಿಸಿ ಸಂಹಿತೆಯನ್ನು ಉಲ್ಲಂಘಿಸಿರುವುದು ಕಂಡು ಬಂದಿದೆ. ಹೀಗಾಗಿ ಇದೀಗ ಸಲಿಯಾ ಸುಮನ್ ಅವರ ಮೇಲೆ 5 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.
ಸಲಿಯಾ ಸಮನ್ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಶ್ರೀಲಂಕಾವನ್ನು ಪ್ರತಿನಿಧಿಸುವ ಅವಕಾಶ ಹೊಂದಿದ್ದರು. ಏಕೆಂದರೆ ಲಂಕಾ ದೇಶೀಯ ಅಂಗಳದಲ್ಲಿ ಸಮನ್ 101 ಪ್ರಥಮ ದರ್ಜೆ, 77 ಲಿಸ್ಟ್ ಎ ಮತ್ತು 47 ಟಿ20 ಪಂದ್ಯಗಳನ್ನು ಆಡಿದ್ದಾರೆ.