ದೆಹಲಿ : ಎನ್‌ಐಎ ಜಮ್ಮು ಮತ್ತು ಕಾಶ್ಮೀರ ಮತ್ತು ಮಹಾರಾಷ್ಟ್ರ ಸೇರಿದಂತೆ 5 ರಾಜ್ಯಗಳ 22 ಸ್ಥಳಗಳಲ್ಲಿ ದಾಳಿ ನಡೆಸಿದ್ದು, ಭಯೋತ್ಪಾದನೆ ನಿಧಿ ವಿರುದ್ಧ ಶೋಧ ಕಾರ್ಯಾಚರಣೆ ನಡೆಸಿದೆ.
ದಾಳಿಯ ಸಂದರ್ಭದಲ್ಲಿ, ಎನ್‌ಐಎ ಅಧಿಕಾರಿಗಳು ಭಯೋತ್ಪಾದಕ ಸಂಘಟನೆ ಜೈಷ್-ಎ-ಮೊಹಮ್ಮದ್‌ನೊಂದಿಗೆ ಸಂಪರ್ಕ ಹೊಂದಿರುವ ಶಂಕಿತ ನಾಲ್ವರನ್ನು ಬಂಧಿಸಿದೆ. ಇಬ್ಬರು ಶಂಕಿತರನ್ನು ಜಲ್ನಾ ಜಿಲ್ಲೆಯಲ್ಲಿ, ಒಬ್ಬನನ್ನು ಛತ್ರಪತಿ ಸಂಭಾಜಿ ನಗರದಲ್ಲಿ ಮತ್ತು ಮತ್ತೊಬ್ಬನನ್ನು ಮಾಲೆಗಾಂವ್‌ನಲ್ಲಿ ಶಂಕಿತ ನಾಲ್ವರನ್ನು ಬಂಧಿಸಲಾಗಿದೆ.
ಇಂದು ಬೆಳಗ್ಗೆ 6 ಗಂಟೆಯಲ್ಲಿ ಮಹಾರಾಷ್ಟ್ರ, ದೆಹಲಿ, ಅಸ್ಸಾಂ, ಉತ್ತರ ಪ್ರದೇಶ ಹಾಗೂ ಜಮ್ಮು ಮತ್ತು ಕಾಶ್ಮೀರ ಈ 5 ರಾಜ್ಯಗಳ 22 ಸ್ಥಳಗಳಲ್ಲಿ ಏಕಕಾಲದಲ್ಲಿ ಎನ್‌ಐಎ ದಾಳಿ ನಡೆಸಿದ್ದು, ಶೋಧ ಕಾರ್ಯ ಮಾಡಲಾಗುತ್ತಿದೆ. ಇನ್ನು ಈ ಶೋಧ ಕಾರ್ಯವು 2-3 ದಿನಗಳ ಕಾಲ ಮುಂದುವರೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.