ಮುಂಬೈ: ಅರ್ಬಾಜ್ ಖಾನ್‌ನೊಂದಿಗೆ 19ವರ್ಷಗಳ ದಾಂಪತ್ಯದ ಬಳಿಕ ವಿಚ್ಛೇದನ ನೀಡಿದ್ದ ಬಳಿಕ ಮಲೈಕಾ ಆರೋರ ತನಗಿಂತ 12ವರ್ಷ ಕಿರಿಯ ಅರ್ಜುನ್ ಕಪೂರ್ ಡೇಟಿಂಗ್ ಮಾಡುತ್ತಿದ್ದರು. ಇದೀಗ ಅವರಿಂದಲೂ ದೂರವಾಗಿ ಒಂಟಿಯಾಗಿರುವ ಮಲೈಕಾ ಆರೋರಾದ್ದು ವರ್ಣರಂಜಿತ ಜೀವನ ಎಂದರೆ ತಪ್ಪಲ್ಲ.
ಪ್ರತೀವರ್ಷ ಅಕ್ಟೋಬರ್ 23ರಂದು ಹುಟ್ಟುಹಬ್ಬ ಆಚರಿಸುವ ಮಲೈಕಾಗೆ ಸದ್ಯ 51ರ ವಯಸ್ಸು. ಈ ವಯಸ್ಸಲ್ಲೂ 20ರ ತರುಣಿಯಂತೆ ಕಂಗೊಳಿಸುವ ಮಲೈಕಾ ತಮ್ಮ ಫಿಟ್‌ನೆಸ್‌ನಿಂದ ಅನೇಕರನ್ನು ಸೆಳೆಯುತ್ತಿದ್ದಾರೆ. ಈಗಲೂ ಪಡ್ಡೆಹುಡುಗರ ನಿದ್ದೆಗೆಡಿಸುವಷ್ಟು ತಮ್ಮ ಸೌಂದರ್ಯವನ್ನು ಕಾಪಾಡಿಕೊಂಡು ಬಂದಿದ್ದಾರೆ.
ಮಲೈಕಾ ತಮ್ಮ ವೃತ್ತಿಜೀವನವನ್ನು ಜನಪ್ರಿಯ ಕಾರ್ಯಕ್ರಮ ಕ್ಲಬ್ MTVಯ VJ ಆಗಿ ಪ್ರಾರಂಭಿಸಿದರು. ಅವರು ಸ್ಟೈಲ್ ಚೆಕ್ ಮತ್ತು ಲವ್ ಲೈನ್‌ನಂತಹ ಹಲವಾರು ಕಾರ್ಯಕ್ರಮಗಳನ್ನು ಸಹ ನಿರೂಪಿಸಿದ್ದಾರೆ. ಮಲೈಕಾ ಅರೋರಾ 1998ರ ಚಿತ್ರ ‘ದಿಲ್ ಸೆ’ ನಲ್ಲಿ ಶಾರುಖ್ ಖಾನ್ ಅವರೊಂದಿಗಿನ ಚೈಯ್ಯ ಚೈಯ್ಯ ಐಟಂ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಖ್ಯಾತಿಯ ಉತ್ತುಂಗಕ್ಕೆ ಏರಿದರು. ಇದಾದ ನಂತರ ಕಾಂಟೆ, EMI ನಲ್ಲೂ ನಟಿಸಿದ್ದಾರೆ. ಹೀಗಿರುವ ಮಲೈಕಾ ಆಸ್ತಿ ಮೌಲ್ಯ 98.98 ಕೋಟಿ ರೂ. ಒಂದು ಐಟಂ ಸಾಂಗ್‌ಗೆ 1.5 ಕೋಟಿಗಿಂತ ಹೆಚ್ಚು ಚಾರ್ಜ್ ಮಾಡ್ತಾರೆ. ಇದರ ಜೊತೆ ತೀರ್ಪುಗಾರರಾಗಿ ಭಾಗವಹಿಸುವ ಅವರು 6-8 ಲಕ್ಷ ಚಾರ್ಜ್ ಮಾಡ್ತಾರೆ.
ಹಾಗೆಯೇ ಮುಂಬೈನ ಬಾಂದ್ರಾದಲ್ಲಿ 14.5 ಕೋಟಿ ರೂ. ಮೌಲ್ಯದ ಐಷಾರಾಮಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಇದರ ಜೊತೆ 30ಕ್ಕೂ ಹೆಚ್ಚು ಬ್ರಾಂಡ್‌ಗಳ ಪ್ರಮೋಟ್ ಮಾಡ್ತಿದ್ದು, ಸ್ವಂತ ಯೋಗ ಸ್ಟುಡಿಯೊವನ್ನು ಸಹ ಹೊಂದಿದ್ದಾರೆ. ಹಾಗೆಯೇ ಮಲೈಕಾ ಹಲವು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. 3.28ಕೋಟಿಯ ರೇಂಜ್ ರೋವರ್ LWB ಕಾರು, 18.09 ರಿಂದ 23.83 ಲಕ್ಷದ ಆಡಿ ಕ್ಯು7 ಹಾಗೂ 1.42 ಕೋಟಿ ಮೌಲ್ಯದ BMW7 ಕಾರನ್ನು ಹೊಂದಿದ್ದಾರೆ.