ಬೆಂಗಳೂರು : ರಾಜ್ಯ ಸರ್ಕಾರ 540 ಗಸ್ತು ಅರಣ್ಯ ಪಾಲಕ (ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅರಣ್ಯ ರಕ್ಷಕ) ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಪ್ರಕ್ರಿಯೆಯ ಅಂಗವಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟಿಸಿದೆ.
ಅರಣ್ಯ ಇಲಾಖೆಯ ಎಲ್ಲಾ 13 ವೃತ್ತಗಳಲ್ಲಿ ದಿನಾಂಕ:20.07.2025ರಂದು ನಡೆಸಲಾಗಿರುವ ಲಿಖಿತ ಪರೀಕ್ಷೆಯ ನಂತರ ಕರ್ನಾಟಕ ಅರಣ್ಯ ಇಲಾಖೆ ಸೇವೆಗಳು (ನೇಮಕಾತಿ) (ತಿದ್ದುಪಡಿ) ನಿಯಮಗಳು 2019ರ ಷೆಡ್ಯೂಲ್-1ರ ಕ್ರ.ಸಂ. 14ರ ಕಂಡಿಕೆ (6) r/w (7)ರನ್ವಯ ವೃತ್ತವಾರು (ಕರಡು) 1:1 ತಾತ್ಕಾಲಿಕ ಆಯ್ಕೆ ಪಟ್ಟಿಗಳನ್ನು ಅನುಬಂಧ-1 ರಿಂದ 13ರಲ್ಲಿ ಈ ಪ್ರಕಟಣೆಯೊಂದಿಗೆ ಅಭ್ಯರ್ಥಿಗಳ ಮಾಹಿತಿಗಾಗಿ ಅರಣ್ಯ ಇಲಾಖೆಯ ಅಧಿಕೃತ ಜಾಲತಾಣ www.aranya.gov.inನಲ್ಲಿ ಈ ಮೂಲಕ ಪ್ರಕಟಿಸಲಾಗಿದೆ.