ಹೈದರಾಬಾದ್ : ತೆಲಂಗಾಣದ ಉಪಮುಖ್ಯಮಂತ್ರಿ ಮತ್ತು ಹಣಕಾಸು ಸಚಿವ ಮಲ್ಲು ಭಟ್ಟಿ ವಿಕ್ರಮಾರ್ಕ ಅವರು ಇಂದು 2025-26ನೇ ಸಾಲಿನ ರಾಜ್ಯ ಬಜೆಟ್ ಅನ್ನು ಮಂಡಿಸಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಗ್ಯಾರಂಟಿ ಯೋಜನೆಗಳಿಗೆ 56,984 ಕೋಟಿ ರೂ. ಮೀಸಲಿಡಲಾಗಿದೆ.
ಈ ವರ್ಷದ ತೆಲಂಗಾಣ ಸರ್ಕಾರದ ಬಜೆಟ್ ಗಾತ್ರ ಮೊದಲ ಬಾರಿಗೆ 3 ಲಕ್ಷ ಕೋಟಿ ರೂ.ಗಳನ್ನು ದಾಟಿದೆ. ತೆಲಂಗಾಣ ಸರ್ಕಾರವು ಈ ಬಾರಿಯ ರಾಜ್ಯ ಬಜೆಟ್ನಲ್ಲಿ 6 ಗ್ಯಾರಂಟಿ ಯೋಜನೆಗಳಿಗೆ ಒಟ್ಟು 56,984 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
ಮಹಾಲಕ್ಷ್ಮಿ ಯೋಜನೆಗೆ 4,305 ಕೋಟಿ ರೂ., ಗೃಹ ಜ್ಯೋತಿಗೆ 2,080 ಕೋಟಿ ರೂ., ಸನ್ನಾ ಅಕ್ಕಿ ಬೋನಸ್ಗೆ 1,800 ಕೋಟಿ ರೂ., ರಾಜೀವ್ ಆರೋಗ್ಯ ಶ್ರೀ ಯೋಜನೆಗೆ 1,143 ಕೋಟಿ ರೂ., ಗ್ಯಾಸ್ ಸಿಲಿಂಡರ್ ಸಬ್ಸಿಡಿಗೆ 723 ಕೋಟಿ ರೂ. ಮತ್ತು ಇಂದಿರಮ್ಮ ಆತ್ಮ ಭರೋಸಾ ಯೋಜನೆಗೆ 600 ಕೋಟಿ ರೂ.ಹಣವನ್ನು ಬಜೆಟ್ನಲ್ಲಿ ಮೀಸಲಿಡಲಾಗಿದೆ.