6 ವರ್ಷಗಳ ಪ್ರೀತಿಗೆ ಮದುವೆ ಮುದ್ರೆ ಒತ್ತಿದ ಸಲಿಂಗ ಜೋಡಿ – ಮಧುರ ಕ್ಷಣಗಳ ವಿಡಿಯೋ ಶೇರ್ ಮಾಡಿದ ವರುಣ್-ಅವಿನಾಶ್ ದಂಪತಿ

ಪ್ರೀತಿಗೆ ಯಾವುದೇ ಧರ್ಮ, ವಯಸ್ಸು, ಬಣ್ಣ, ಸೌಂದರ್ಯ ಮುಖ್ಯವಲ್ಲ ಅಂತಾ ಹೇಳುವ ಒಂದು ಕಾಲವಿತ್ತು. ಆದರೆ ಇದೀಗ ಪ್ರೀತಿಗೆ ಲಿಂಗವೂ ಮುಖ್ಯವಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ. ಹೊರದೇಶದಲ್ಲಿ ಆಗುತ್ತಿದ್ದ ಸಲಿಂಗಕಾಮಿಗಳ ಮದುವೆ ಇದೀಗ ನಮ್ಮ ಭಾರತ ದೇಶದಲ್ಲೂ ನಡೆಯುತ್ತಿದೆ. ಅನೇಕ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಉಂಟು. ಇದಕ್ಕೆ ಉದಾಹರಣೆ ಮಹಾರಾಷ್ಟ್ರದ ಅವಿನಾಶ್ ಹಾಗೂ ವರುಣ್ ದಂಪತಿ. 6 ವರ್ಷಗಳ ಕಾಲ ಪ್ರೀತಿ ಮಾಡಿದ ಇವರು ಕುಟುಂಬದ ಒಪ್ಪಿಗೆ ಮೇರೆಗೆ ಲೋನಾವಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ತಮ್ಮ ಸಂಬಂಧ ಬಗೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಾಕಿ ವರುಣ ಪೋಸ್ಟ್ ಮಾಡಿದ್ದಾರೆ. ‘6 ವರ್ಷಗಳ ದೀರ್ಘ ಪ್ರೇಮ ಸಂಬಂಧ ಮುಗ್ಗರಿಸಿದ್ದರಿಂದ ನಾನು ತೀವ್ರ ಬೇಸರದಲ್ಲಿದ್ದೆ. 2021ರಲ್ಲಿ ಪೋಷಕರನ್ನು ನೋಡಲು ಆಗಷ್ಟೇ ಭಾರತಕ್ಕೆ ಬಂದಿದ್ದ ನಾನು ಅವಿನಾಶ್ ಅವರನ್ನು ಭೇಟಿಮಾಡಿದೆ. ನಾನು ಗಂಭೀರವಾಗಿ ಸಂಗಾತಿಯ ಹುಡುಕಾಟದಲ್ಲಿದ್ದೆ. ನಾನು ಮತ್ತು 37 ವರ್ಷದ ಅವಿನಾಶ್ ಪರಸ್ಪರ ಪ್ರೀತಿಯಲ್ಲಿ ಬಿದ್ದೆವು.

ಆದರೆ ನಮ್ಮ ಸಂಬಂಧವನ್ನು ಮೊದಮೊದಲು ಎರಡೂ ಕಡೆಯ ಪೋಷಕರು ಒಪ್ಪಲಿಲ್ಲ. ಕೊನೆಗೆ ಒಪ್ಪಿಕೊಂಡರು. ಸಾಕಷ್ಟು ಕಲ್ಯಾಣಮಂಟಪಗಳು ಬಾಡಿಗೆ ಕೊಡಲು ನಿರಾಕರಿಸಿದವು. ಕೊನೆಗೆ ಲೋನಾವಾಲದಲ್ಲಿ ಸಪ್ತಪದಿಯನ್ನು ತುಳಿದೆವು. 150 ಜನರು ಅತಿಥಿಗಳು ನಮ್ಮ ಮದುವೆಗೆ ಬಂದು ಹಾರೈಸಿದರು. ಪೋಷಕರು ಮನದುಂಬಿ ಹಾರೈಸಿದರು. ಸಿಯಾರಾ (ನಾಯಿ)ಳೊಂದಿಗೆ ನಮ್ಮ ಪುಟ್ಟ ಸಂಸಾರ ನೌಕೆ ಸಾಗುತ್ತಿದೆ’ ಎಂದು ಬರೆದುಕೊಂಡಿದ್ದಾರೆ.

Advertisement

ಈ ವಿಡಿಯೋ ಅನ್ನು officialpeopleofindia ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದೆ. ಈತನಕ 1.2 ಲಕ್ಷ ಜನರು ಲೈಕ್ ಮಾಡಿದ್ದು ಸುಮಾರು ಮೂರು ಮಿಲಿಯನ್​ ಜನರು ನೋಡಿದ್ದಾರೆ. ಸಾವಿರಾರು ಜನರು ಈ ಜೋಡಿಗೆ ಶುಭಹಾರೈಸಿ ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಇವರಿಬ್ಬರ ವಿಡಿಯೋ ನೆಟ್ಟಿಗರು ಭಾರೀ ಪ್ರತಿಕ್ರಿಯಿಸಿದ್ದಾರೆ. ಕೆಲವರ ಹೀಗಿದೆ..‌

ಸಲಿಂಗ ವಿವಾಹವನ್ನು ಸಮಾಜವು ಸಹಜವಾಗಿ ಸ್ವೀಕರಿಸುತ್ತಿರುವ ಬಗ್ಗೆ ಖುಷಿ ಇದೆ ಎಂದು ಒಬ್ಬರು ಹೇಳಿದ್ಧಾರೆ.

ಇಷ್ಟವಿಲ್ಲದ ಸಂಬಂಧದಲ್ಲಿದ್ದು ಗೋಳಾಡುವುದಕ್ಕಿಂತ ಇದು ಬಹಳ ಒಳ್ಳೆಯದು, ನಿಮ್ಮಿಬ್ಬರನ್ನು ನೋಡಲು ಬಹಳ ಖುಷಿಯಾಗುತ್ತಿದೆ ಎಂದಿದ್ದಾರೆ ಇನ್ನೊಬ್ಬರು.

ಈ ವಿಷಯದಲ್ಲಿ ತಮ್ಮ ಮಕ್ಕಳ ಇಂಗಿತವನ್ನು ಕುಟುಂಬವು ಒಪ್ಪಿ ನೆರವೇರಿಸಿಕೊಡುವುದು ಮುಖ್ಯ, ಇದಕ್ಕಿಂತ ಹೆಚ್ಚಿನ ಖುಷಿ ಏನಿದೆ? ಎಂದಿದ್ದಾರೆ ಮತ್ತೊಬ್ಬರು. ಪ್ರೀತಿಯ ಮುಂದೆ ಸಮಾಜವು ಸೋಲುತ್ತದೆ ಎಂದಿದ್ದಾರೆ ಮಗದೊಬ್ಬರು.

ದೇವರು ನಿಮ್ಮನ್ನು ಪರಸ್ಪರಿಗಾಗಿ ರೂಪಿಸಿದ್ದಾನೆ, ನಿಮ್ಮ ಮೇಲೆ ಯಾರದೇ ಕೆಟ್ಟ ದೃಷ್ಟಿ ಬೀಳದಿರಲಿ ಎಂದು ನೆಟ್ಟಿಗರು ಹಾರೈಸಿದ್ದಾರೆ. ನಾನು ನನ್ನ ಸಂಗಾತಿಯನ್ನು ಹುಡುಕುತ್ತಿದ್ದೇನೆ, ಎಲ್ಲಿದ್ದಾನೋ ಏನೋ ಆದಷ್ಟು ಬೇಗ ಸಿಗಲಿ ಎಂದು ಕೇಳಿಕೊಂಡಿದ್ದಾರೆ ಕೆಲವರು…!

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement