ನವದೆಹಲಿ: 69 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಘೋಷಿಸಲಾಗಿದ್ದು, ಅತ್ಯುತ್ತಮ ಕನ್ನಡ ಚಿತ್ರವಾಗಿ ʼ777 ಚಾರ್ಲಿʼ ಆಯ್ಕೆಯಾಗಿದೆ.
‘ಕಡೈಸಿ ವ್ಯವಸಾಯಿ’ ಅತ್ಯುತ್ತಮ ತಮಿಳು ಚಿತ್ರವಾಗಿ ಆಯ್ಕೆಯಾಗಿದರೆ, ‘ಉಪ್ಪೇನ’ ಮತ್ತು ‘ಹೋಮ್’ ತೆಲುಗು ಮತ್ತು ಮಲಯಾಳಂನ ಅತ್ಯುತ್ತಮ ಚಿತ್ರಗಳಾಗಿ ಆಯ್ಕೆಯಾಗಿವೆ.
‘ಗಂಗೂಬಾಯಿ ಕಥಿವಾಡಿ’ ಮತ್ತು ‘ಮಿಮಿ’ ಚಿತ್ರಕ್ಕಾಗಿ ಆಲಿಯಾ ಭಟ್ ಮತ್ತು ಕೃತಿ ಸನೋನ್ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ‘ಪುಷ್ಪ: ದಿ ರೈಸ್’ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ.