ಬಾಡಿಗೆ ಮನೆಯನ್ನು.ಪರಭಾಷಿಗರಿಗೆ ಹಾಗೂ ವಿದೇಶಿಗರು ಮನೆಗಳನ್ನು ಬಾಡಿಗೆಗೆ ಪಡೆದು ವಾಸಿಸುತ್ತಾರೆ. ಯಾವುದೇ ಮಾಹಿತಿ ತಿಳಿಯದೆ ಮನೆ ಬಾಡಿಗೆಗೆ ಕೊಡುವುದ್ರಿಂದ ನಾನಾ ಅನಾಹುತ ಕೂಡ ಸಂಭವಿಸುತ್ತದೆ.
ಹೀಗಾಗಿ ಪೊಲೀಸರು ಸಿಲಿಕಾನ್ ಸಿಟಿ ಮನೆ ಮಾಲೀಕರಿಗೆ ಗೈಡ್ ಲೈನ್ಸ್ ಹೊರಡಿಸಿದ್ದಾರೆ. ವಿದೇಶಿ ಪ್ರಜೆಗಳಿಗೆ ಮನೆ ಬಾಡಿಗೆಗೆ ಕೊಡುವುದು ಸಿಕ್ಕಾಪಟ್ಟೆ ಡೇಂಜರ್ ಎನ್ನಲಾಗ್ತಿದೆ. ಕೆಲವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರ್ತಾರೆ. ಇಂಥವರನ್ನ ಗುರುತಿಸೋದು ಕಷ್ಟವಾಗಿದೆ. ಹೀಗಾಗಿ ವಿದೇಶಿ ಪ್ರಜೆಗಳು ವಾಸವಿರುವ ಮನೆ ಮಾಲೀಕರಿಗಾಗಿ ಮಾರ್ಗಸೂಚಿ ಹೊರಡಿಸಿದ್ದಾರೆ. ಮನೆ ಮಾಲೀಕರಿಗೆ 7 ಗೈಡ್ಲೈನ್ಸ್
1. ಮನೆ ಮಾಲೀಕರು ಸಿ ಫಾರ್ಮ್ ಅನ್ನ ಎಫ್ಆರ್ ಆರ್ ಓ/ ಎಫ್ಆರ್ ಓಗೆ ಸಲ್ಲಿಸಬೇಕು.
2. ಬಾಡಿಗೆದಾರರ ಪಾಸ್ ಪೋರ್ಟ್ ಮತ್ತು ವೀಸಾ ಪ್ರತಿಗಳು ಕಡ್ಡಾಯವಾಗಿ ಸಂಗ್ರಹಿಸಬೇಕು.
3. ಬಾಡಿಗೆ ನೀಡುವ ಮೊದಲು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.
4. ಮಾನ್ಯ ವೀಸಾ/ಅನುಮತಿ ಇಲ್ಲದೆ ವಾಸಿಸಲು ಅವಕಾಶ ನೀಡಬಾರದು.
5. ನೊಂದಾಯಿತ ಬಾಡಿಗೆ ಒಪ್ಪಂದ ಮಾಡಬೇಕು.
6. ವಿದೇಶಿ ಬಾಡಿಗೆದಾರರ ಬಗ್ಗೆ ಮಾಹಿತಿ ನೀಡದೆ ಇದ್ದರೆ ಕಾನೂನು ಕ್ರಮ.
7. ಯಾವುದೇ ಅನುಮಾನಸ್ಪದ ಚಟುವಟಿಕೆ ಕಂಡು ಬಂದರೆ ಕೂಡಲೇ ಪೊಲೀಸರಿಗೆ ತಿಳಿಸಬೇಕು.