ಮಧುರೈ : ದೇಶಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಯೋಜಿಸಲಾಗಿದೆ. ತಮಿಳುನಾಡಿನ ಮಧುರೈನಲ್ಲಿ ನಡೆದ ಕಾರ್ಯಕ್ರಮದಲ್ಲಿ 73 ವರ್ಷದ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಕೂಡ ಭಾಗಿಯಾಗಿದ್ದರು.
ಈ ವೇಳೆ ಅವರು ಮಧುರೈನಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ 10,000ಕ್ಕೂ ಹೆಚ್ಚು ಯೋಗಾಸಕ್ತರಿಗೆ ಅಚ್ಚರಿ ಮೂಡಿಸಿದರು. ಒಂದು ಭೂಮಿಗಾಗಿ ಯೋಗ, ಒಂದು ಆರೋಗ್ಯಕ್ಕಾಗಿ ಯೋಗ” ಎಂಬ ಥೀಮ್ನೊಂದಿಗೆ 11ನೇ ಅಂತಾರಾಷ್ಟ್ರೀಯ ಯೋಗ ದಿನದ ಜಾಗತಿಕ ಆಚರಣೆಯ ಭಾಗವಾಗಿ ಈ ಕಾರ್ಯಕ್ರಮವನ್ನು ಇಂದು ಬೆಳಿಗ್ಗೆ ವೇಲಮ್ಮಳ್ ಶಿಕ್ಷಣ ಸಂಸ್ಥೆಯಲ್ಲಿ ನಡೆಸಲಾಯಿತು.
ಈ ವೇಳೆ ಟ್ರ್ಯಾಕ್ಸೂಟ್ ಮತ್ತು ವೆಸ್ಟ್ ಧರಿಸಿದ ರಾಜ್ಯಪಾಲ ರವಿ ಯೋಗ ಪ್ರದರ್ಶನದ ವೇಳೆ 51 ಪುಶ್-ಅಪ್ಗಳನ್ನು ಮಾಡುವ ಮೂಲಕ ಜನರನ್ನು ಅಚ್ಚರಿಗೊಳಿಸಿದರು. 73ನೇ ವಯಸ್ಸಿನಲ್ಲೂ ಅವರು ಫಿಟ್ ಆಗಿರುವ ರೀತಿಯನ್ನು ಕಂಡು ಯುವಕರು ಬೆರಗಾದರು.