ಹೊಸದಿಲ್ಲಿ: ಬಾವಿಯೊಳಗೆ ಉಸಿರುಕಟ್ಟಿ 8 ಮಂದಿ ಸಾವಿಗೀಡಾದ ದಾರುಣ ಘಟನೆ ಮಧ್ಯ ಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ ಸಂಭವಿಸಿದೆ. ಛಾಯ್‌ಗಾಂವ್ ಮಖಾನ ಎಂಬಲ್ಲಿ ಊರಿನ ಉತ್ಸವದ ವಿಗ್ರಹ ವಿಸರ್ಜನೆಗೆ ಮುಂಚಿತವಾಗಿ ಬಾವಿಯ ನೀರನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದ್ದಾಗ ಬಾವಿಯಲ್ಲಿದ್ದವರು ವಿಷಾನಿಲದಿಂದಾಗಿ ಉಸಿರುಕಟ್ಟಿ ಸಾವಿಗೀಡಾಗಿದ್ದಾರೆ.
ಮೊದಲು ಓರ್ವ ಕಾರ್ಮಿಕ ಬಾವಿಗಿಳಿದಿದ್ದು, ಅತ ಉಸಿರುಕಟ್ಟಿ ಒದ್ದಾಡುವುದನ್ನು ನೋಡಿ ಉಳಿದವರು ಅವನನ್ನು ರಕ್ಷಿಸಲು ಇಳಿದಿದ್ದರು. ಆದರೆ ಎಲ್ಲರೂ ಉಸಿರುಕಟ್ಟಿ ಮೇಲೆ ಬರಲಾಗದೆ ಸಾವಿಗೀಡಾಗಿದ್ದಾರೆ. ಈ ಬಾವಿ 150 ವರ್ಷಗಳಷ್ಟು ಹಳೆಯದು ಎನ್ನಲಾಗಿದೆ. ಮಡಿದಿರುವ ಎಲ್ಲರೂ 23ರಿಂದ 35 ವರ್ಷ ವಯಸ್ಸಿನ ಯುವಕರು.