ಇತ್ತೀಚಿನ ದಿನಗಳಲ್ಲಿ ಸಿನಿಮಾದಲ್ಲಿ ಮದುವೆ, ಮಕ್ಕಳದ್ದೇ ಸುದ್ದಿ. ಅದರಲ್ಲಿಯೂ ವಯಸ್ಸಿನಲ್ಲಿ ಹೆಚ್ಚು ಅಂತರವುಳ್ಳವರನ್ನು ಮದುವೆಯಾಗುವುದು ಸಾಮಾನ್ಯವಾಗಿದೆ. ಈ ಹಿಂದೆ 2-3 ಮಕ್ಕಳ ತಂದೆಯನ್ನು ನಟಿಯರು ವರಿಸಿದ್ದು ಇದ್ದರೆ ಈಗ ಸುದ್ದಿಯಾಗುತ್ತಿರುವುದು ಹೆಚ್ಚು ವಯಸ್ಸಿನ ಅಂತರದ ಮದುವೆಯ ಕುರಿತು. ಇದೀಗ ಅವೆಲ್ಲವುಗಳಿಂದಲೂ ಒಂದು ಹೆಜ್ಜೆ ಮುಂದೆ ಹೋಗಿ ಕುತೂಹಲದ ಘಟನೆ ನಡೆದಿದೆ. ಅದು ಸಾಮಾನ್ಯವಾಗಿ ಯಾರೂ ಕಲ್ಪಿಸಿಕೊಳ್ಳದಂಥ ಘಟನೆಯಾಗಿದೆ.
ಅದೇನೆಂದರೆ 83 ವರ್ಷದ ಸೂಪರ್ಸ್ಟಾರ್ ನಟನೊಬ್ಬ ಅಪ್ಪ ಆಗ್ತಿರೋ ಸುದ್ದಿ ಇದು. ಈ ವಯಸ್ಸಿನಲ್ಲಿ ಅಪ್ಪ ಆಗಿದ್ದೇ ಅಚ್ಚರಿ ಎಂದರೆ, ಇನ್ನೂ ಹೆಚ್ಚಿನ ಅಚ್ಚರಿಯಾಗಿರುವುದು ಇವರ ಅಪ್ಪ ಆಗ್ತಿರೋದು ತಮ್ಮ ಮೊಮ್ಮಗಳ ವಯಸ್ಸಿನ ಗರ್ಲ್ಫ್ರೆಂಡ್ನಿಂದಾಗಿ. ಹೌದು, ಕೇಳಲು ಸ್ವಲ್ಪ ಅಸಹ್ಯ ಎನಿಸಿದರೂ ಇದು ಸತ್ಯ.
ಈ ನಟನ ಗರ್ಲ್ಫ್ರೆಂಡ್ಗೆ ವಯಸ್ಸು 29. 29ರ ಹರೆಯದ ಸ್ನೇಹಿತೆಯಿಂದ ತಂದೆಯಾಗುತ್ತಿದ್ದಾರೆ 83 ವರ್ಷದ ನಟ. ಇವರು ಅಂತಿಂಥ ನಟನಲ್ಲ, ಬದಲಿಗೆ ಆಸ್ಕರ್ ಪ್ರಶಸ್ತಿ ಪುರಸ್ಕೃತ ನಟ. ಹಾಲಿವುಡ್ ಖ್ಯಾತ ನಟನಾಗಿರುವ ಅಲ್ ಪಸಿನೊ ತನ್ನ 29 ವರ್ಷದ ಗರ್ಲ್ಫ್ರೆಂಡ್ ಮಗುವಿಗೆ ತಂದೆಯಾಗುವ ಸಂಭ್ರಮದಲ್ಲಿದ್ದಾರೆ. ಇದಾಗಲೇ ಇಬ್ಬರು ಹೆಂಡತಿಯರಿಂದ ಮೂರು ಮಕ್ಕಳ ತಂದೆಯಾಗಿರುವ ಅಲ್ ಪಸಿನೊ, ಈಗ 29 ವರ್ಷದ ನೂರ್ ಆಲ್ಫಲ್ಲಾ ಎಂಬಾಕೆಯಿಂದ ಮಗು ಪಡೆಯುತ್ತಿದ್ದಾರೆ. 2022ರಿಂದ ಇವರು ಒಟ್ಟಿಗೆ ಇದ್ದು, ಅದರ ಫಲವಾಗಿ ನೂರ್ ಗರ್ಭಿಣಿಯಾಗಿದ್ದಾರೆ. ಈ ಸಂತೋಷದ ವಿಷಯವನ್ನು ಖುದ್ದು ನಟ ಶೇರ್ ಮಾಡಿಕೊಂಡಿದ್ದಾರೆ. ನೂರ್ ಆಲ್ಫಲ್ಲಾ ಜೊತೆ ತಾವು ಡೇಟಿಂಗ್ ಮಾಡುತ್ತಿದ್ದು, ಅದರ ಫಲವಾಗಿ ಮಗುವಾಗುತ್ತಿದೆ ಎಂದು ಸಂತಸದಿಂದ ನಟ ಹೇಳಿಕೊಂಡಿದ್ದಾರೆ.