ಮಣಿಪುರ ಕೇಸ್ : ಪೊಲೀಸರು ತನಿಖೆಗೆ ಅಸಮರ್ಥರು ‘ಸುಪ್ರೀಂ’ ಕಿಡಿ

ನವದೆಹಲಿ : ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಹಾಗೂ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ವಿಡಿಯೋ ಕುರಿತು ಎಫ್ ಐಆರ್ ದಾಖಲಿಸುವಲ್ಲಿ ವಿಳಂಬವಾಗಿರುವುದಕ್ಕೆ ಕಿಡಿಕಾರಿರುವ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆಯನ್ನು ಆಗಸ್ಟ್ 7 ರಂದು ನಿಗದಿಪಡಿಸಿದ್ದು, ಅಂದು ಮಧ್ಯಾಹ್ನ 2 ಗಂಟೆಗೆ ಮಣಿಪುರದ ಡಿಜಿಪಿ ನ್ಯಾಯಾಲಾಯದ ಮುಂದೆ ಹಾಜರಾಗುವಂತೆ ನಿರ್ದೇಶನ ನೀಡಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರುವ ಸಿಜೆಐ ಡಿ.ವೈ ಚಂದ್ರಚೂಡ್ ನೇತೃತ್ವದ ಪೀಠ ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದೆ. ರಾಜ್ಯದಲ್ಲಿ 6000 ಅಧಿಕ ಎಫ್‍ಐಆರ್ ಗಳು ದಾಖಲಾಗಿವೆ, ಆದರೆ ಒಂದೆರಡು ಪ್ರಕರಣಗಳಲ್ಲಿ ಮಾತ್ರ ಆರೋಪಿಗಳ ಬಂಧನವಾಗಿದೆ. ತನಿಖೆ ನಿಧಾನವಾಗಿ ನಡೆಯುತ್ತಿದೆ. ಘಟನೆ ನಡೆದು ಬಹಳಷ್ಟು ದಿನಗಳ ಬಳಿಕ ಹೇಳಿಕೆ ಪಡೆಯಲಾಗಿದೆ. ಇದರಿಂದ ಕಾನೂನು ಮತ್ತು ಆಡಳಿತ ಯಂತ್ರ ನಿಷ್ಕ್ರಿಯವಾಗಿತ್ತು ಎನ್ನುವುದು ಗೊತ್ತಾಗುತ್ತಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡದ ಕಾರಣ ಆರೋಪಿಗಳನ್ನು ಬಂಧಿಸಿಲ್ಲ ಎಂದುಕೊಂಡರೂ, ಎರಡು ತಿಂಗಳಿಂದ ಎಫ್‍ಐಆರ್ ಯಾಕೆ ದಾಖಲಿಸಿಲ್ಲ ಎಂದು ಸಿಜೆಐ ಚಂದ್ರಚೂಡ್ ಪ್ರಶ್ನಿಸಿದರು. ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದ ಮಂಡಿಸಿದರು. 6000 ಎಫ್‍ಐಆರ್ ದಾಖಲಾಗಿದೆ, 11 ಎಫ್‍ಐಆರ್ ಗಳಲ್ಲಿ ಏಳು ಮಂದಿ ಆರೋಪಿಗಳನ್ನು ಮಾತ್ರ ಬಂಧಿಸಿದೆ. ಯಾವುದೇ ಮುಜುಗರವಿಲ್ಲದೇ ಹೇಳಿಕೆ ದಾಖಲಿಸುತ್ತಿದ್ದೀರಿ ಇದರ ಪರಿಣಾಮ ನಿಮಗೆ ಅರಿವಿದೆಯೇ? ಕಾನೂನು ಮತ್ತು ಸುವ್ಯವಸ್ಥೆ ರಕ್ಷಿಸಲು ಸಾಧ್ಯವಾಗದಿದ್ದರೆ ಜನರಿಗೆ ಏನಾಗುತ್ತದೆ ಎಂದು ಗೊತ್ತಿದೆಯೇ ಎಂದು ಸಿಜೆಐ ಕೇಳಿದರು. ಘಟನೆ ಮತ್ತು ದೂರು ದಾಖಲಾದ ದಿನಾಂಕದಲ್ಲಿ ವ್ಯತ್ಯಾಸವಿದೆ. ತನಿಖೆ ವಿಳಂಬವಾಗಿರುವುದು ಗೊತ್ತಾಗುತ್ತಿದೆ, ತನಿಖೆಯ ಪೂರ್ಣ ವಿವರಣೆಗಾಗಿ ಶುಕ್ರವಾರದ ವಿಚಾರಣೆ ವೇಳೆ ಕೋರ್ಟ್ ಮುಂದೆ ಪೊಲೀಸ್ ಮಹಾ ನಿರ್ದೇಶಕರು ಖುದ್ದು ಹಾಜರಿರಬೇಕು ಎಂದು ಸೂಚಿಸಿದೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement