ಪಂಜಾಬ್: ಸ್ವಂತ ತಂದೆಯೇ , ಮಗಳನ್ನು ಹತ್ಯೆ ಮಾಡಿ , ಆಕೆಯ ದೇಹವನ್ನು ಬೈಕ್‌ಗೆ ಕಟ್ಟಿ, ರಸ್ತೆಯಲ್ಲಿ ಎಳೆದೊಯ್ದು ರೈಲು ಹಳಿಗಳ ಮೇಲೆ ಎಸೆದುಬಂದ ಭೀಕರ ಘಟನೆ ಗುರುವಾರ ಪಂಜಾಬ್‌ನ ಅಮೃತಸರ ಜಿಲ್ಲೆಯಲ್ಲಿ ನಡೆದಿದ್ದು, ಕೃತ್ಯದ ಸಿಸಿಟಿವಿ ದೃಶ್ಯಾವಳಿ ಕೂಡಾ ದೊರಕಿದೆ.
ಪ್ರಾಥಮಿಕ ತನಿಖೆಯಿಂದ ಆರೋಪಿಯು ತನ್ನ ಮಗಳ ಚಾರಿತ್ರ್ಯ ಶಂಕಿಸಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮನೆಬಿಟ್ಟು ತೆರಳಿದ್ದ ಮಗಳು , ವಾಪಾಸ್ ಮನೆಗೆ ಬಂದಾಗ ತಂದೆ ಹರಿತವಾದ ಆಯುಧ ಬಳಸಿ ಮಗಳನ್ನು ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.
“ಆರೋಪಿಯು ತನ್ನ ಕುಟುಂಬ ಸದಸ್ಯರೆಲ್ಲರನ್ನೂ ಮನೆಯಲ್ಲಿ ಕೂಡಿಹಾಕಿ ಅವರನ್ನೂ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ. ಹೀಗಾಗಿ ಅವರು ಭಯದಿಂದ ಹೊರಬರಲು ಸಾಧ್ಯವಾಗಲಿಲ್ಲ” ಎಂಬ ಮಾಹಿತಿಯೂ ನಮಗೆ ಬಂತು ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
“ನನ್ನ ಮೊಮ್ಮಗಳು ಮನೆಯಿಂದ ಹೊರಟು ಹೋಗಿದ್ದು ಬಳಿಕ ತಾನೇ ಹಿಂತಿರುಗಿದಳು.ಆದರೆ ಈ ವೇಳೆ ಆಕೆಯ ತಂದೆ ಕೋಪಗೊಂಡು ಆಕೆಯ ಕೊಲೆ ಮಾಡಿದ್ದಾನೆ” ಯುವತಿಯ ಅಜ್ಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ