ಸಂಚಾರಿ ಆರೋಗ್ಯ ಘಟಕದ ಸದುಪಯೋಗ ಪಡೆದುಕೊಳ್ಳಿ -ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ

 

ಚಿತ್ರದುರ್ಗ: ಗಣಿ ಬಾಧಿತ ಪ್ರದೇಶದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಜಿಲ್ಲಾ ಖನಿಜ ಘಟಕದ ವತಿಯಿಂದ ಸಂಚಾರಿ ಆರೋಗ್ಯ ಘಟಕ ನೀಡಲಾಗಿದೆ. ಸಾರ್ವಜನಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.

ಚಿತ್ರದುರ್ಗ ನಗರದ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ಸಂಚಾರಿ ಆರೋಗ್ಯ  ಘಟಕದ ವಾಹನಕ್ಕೆ  ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.

Advertisement

ಸಂಚಾರಿ ಆರೋಗ್ಯ ಘಟಕ ಜನರಿಗೆ ಬಹಳ ಉಪಯುಕ್ತವಾಗಿದೆ. ಇದರ ಮೂಲಕ ಗ್ರಾಮಗಳಿಗೆ ತೆರಳಿ ಆರೋಗ್ಯ ಸೇವೆಯನ್ನು ಒದಗಿಸಲಾಗುತ್ತದೆ. ಇದರಿಂದ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ತಲುಪಿಸಲಾಗುತ್ತದೆ. ಈ ಆರೋಗ್ಯ ಘಟಕದಲ್ಲಿ ವೈದ್ಯರು, ಫಾರ್ಮಸಿಸ್ಟ್, ಪ್ರಯೋಗಶಾಲಾ ತಜ್ಞರು, ಶುಶ್ರೂಷಕರು, ವಾಹನ ಚಾಲಕ ಹಾಗೂ ಡಿ ದರ್ಜೆ ನೌಕರರು ಕರ್ತವ್ಯ ನಿರ್ವಹಿಸುತ್ತಾರೆ ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಆರ್.ರಂಗನಾಥ್ ಮಾತನಾಡಿ, ಗಣಿ ಬಾಧಿತ ಪ್ರದೇಶಗಳಲ್ಲಿ ವೈದ್ಯಕೀಯ ಸೇವೆ ನೀಡುವುದರ ಮೂಲಕ, ಸಾರ್ವಜನಿಕರಲ್ಲಿ ಸಾಧಾರಣವಾಗಿ ಕಂಡುಬರುವ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಸಂಚಾರಿ ಚಿಕಿತ್ಸೆ ಪ್ರಯೋಗಾಲಯಗಳ ಪರೀಕ್ಷೆ ಮಾಡಲಾಗುವುದು. ಜೊತೆಗೆ ಬಾಣಂತಿ ಗರ್ಭಿಣಿಯರ ಆರೈಕೆ, ತಾಯಿ ಮಕ್ಕಳ ಲಸಿಕೆ ಕಾರ್ಯಕ್ರಮ, ಕುಟುಂಬ ಕಲ್ಯಾಣ ಯೋಜನಾ ಅನುμÁ್ಠನ, ಮಾಹಿತಿ ಶಿಕ್ಷಣ ಸಂವಹನ, ಆರೋಗ್ಯ ಜಾಗತಿಯನ್ನು ಸಂಚಾರಿ ಆರೋಗ್ಯ ಘಟಕದಿಂದ ನಿರ್ವಹಿಸಲಾಗುವುದು. ತುರ್ತು ಸಂದರ್ಭದಲ್ಲಿ ಉನ್ನತ ಮಟ್ಟದ ಆಸ್ಪತ್ರೆಗಳಿಗೆ ರೋಗಿಗಳನ್ನು ನಿರ್ದೇಶನ ಮಾಡಲಾಗುವುದು ಎಂದರು.

ತಾಲೂಕು ಅರೋಗ್ಯ ಅಧಿಕಾರಿ ಡಾ.ಬಿ.ವಿ.ಗಿರೀಶ್ ಮಾತನಾಡಿ, ತಾಲೂಕಿನ 46 ಹಳ್ಳಿಗಳಿಗೆ ಕ್ರೀಯಾ ಯೋಜನೆ ಅನುಸಾರ ನಿಗದಿತ ದಿನಾಂಕಗಳಂದು ಸಂಚಾರಿ ಆರೋಗ್ಯ ಘಟಕ ಭೇಟಿ ಆರೋಗ್ಯ ಸೇವೆ ಒದಗಿಸಲಿದೆ ಎಂದರು.

ಕಾರ್ಯಕ್ರಮದಲ್ಲಿ ತಾಲೂಕ ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್, ಬಿ.ಮುಗಪ್ಪ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜೆ.ಆರ್.ಗೌರಮ್ಮ, ಹೆಚ್.ಬಿ.ಪೂಜಾರ್,   ಕೆ.ಎ.ಮಾರುತಿ ಪ್ರಸಾದ್,  ಗಂಗಾಧರೆಡ್ಡಿ, ರಂಗಾರೆಡ್ಡಿ, ಶ್ರೀಧರ್, ಆಶಾ ಕಾರ್ಯಕರ್ತೆಯರು ಸೆರಿದಂತೆ ಇತರೆ ಸಿಬ್ಬಂದಿ ಇದ್ದರು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement