ದೆಹಲಿ:ಬ್ಯಾಟರಿ ಹಾಗೂ ಅನಗತ್ಯವಾಗಿ ಡೇಟಾ ತಿನ್ನುತ್ತಿದ್ದ 43 ಆ್ಯಪ್‌ಗಳನ್ನು ಗೂಗಲ್ ಪ್ಲೇ ಸ್ಟೋರ್ ಪತ್ತೆಹಚ್ಚಿದ್ದು, ಇವುಗಳನ್ನು ಡಿಲೀಟ್ ಮಾಡುವಂತೆ ತನ್ನ ಬಳಕೆದಾರರಿಗೆ ಸೂಚಿಸಿದೆ.
ಈ ಆ್ಯಪ್‌ಗಳು ಗೂಗಲ್ ನಿಯಮ ಮೀರಿದ್ದು, ಫೋನ್ ಆಫ್ ಮಾಡಿದ ಬಳಿಕವೂ ಜಾಹೀರಾತು ಪ್ರದರ್ಶಿಸುತ್ತಿದ್ದವು. ಇವುಗಳಲ್ಲಿ ಟಿವಿ/ ಡಿಎಂಬಿ ಪ್ಲೇಯರ್ಸ್, ಮ್ಯೂಸಿಕ್, ನ್ಯೂಸ್ ಹಾಗೂ ಕ್ಯಾಲೆಂಡರ್ ಆ್ಯಪ್ ಸೇರಿಕೊಂಡಿವೆ. ಫೋನ್ ಸೆಟ್ಟಿಂಗ್ಸ್ ನಲ್ಲಿ ಬ್ಯಾಟರಿ ಪರಿಶೀಲಿಸಿ ಇಂಥ ಆ್ಯಪ್ ಡಿಲೀಟ್ ಮಾಡಬಹುದಾಗಿದೆ.