ಕೀನ್ಯಾ: ಉಪವಾಸವಿದ್ದು ಜೀವಂತ ಸಮಾಧಿಯಾದರೆ ಸ್ವರ್ಗ ಪ್ರಾಪ್ತಿಯಾಗುತ್ತದೆ, ಏಸುವನ್ನು ನೋಡಬಹುದು ಎಂದು ಪಾದ್ರಿಯೊಬ್ಬರು ಹೇಳಿದ್ದ ಮಾತು ನಂಬಿ ಮಕ್ಕಳು ಸಮೇತ ಜೀವಂತ ಸಮಾಧಿಯಾದವರ ಸಂಖ್ಯೆ 110 ದಾಟಿದೆ.!
ಈ ಘಟನೆ ನಡೆದಿರುವುದು ಕೀನ್ಯಾದ ಕರಾವಳಿ ಪಟ್ಟಣವಾದ ಮಲಿಂಡಿ ಬಳಿ. ಪೊಲೀಸರು ಕನಿಷ್ಠ 110 ಶವಗಳನ್ನು ಹೊರತೆಗೆದಿದ್ದಾರೆ, ಮತ್ತಷ್ಟು ಮೃತದೇಹಗಳು ದೊರೆಯುವ ನಿರೀಕ್ಷೆ ಇದೆಯಂತೆ.!
ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗಲಿದೆ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. ಯಾರಾದರೂ ಬದುಕಿರಬಹುದೆಂಬ ನಿರೀಕ್ಷೆಯಲ್ಲಿ ಪೊಲೀಸರು ಸಮಾಧಿಯನ್ನು ಅಗೆಯುತ್ತಿದ್ದಾರೆ. ಆ ಮೃತದೇಹಗಳಲ್ಲಿ ಮಕ್ಕಳೂ ಇದ್ದಾರೆ ಎಂದು ಹುಡುಕುತ್ತಿದ್ದಾರೆ.!