ನವದೆಹಲಿ: ಸಾವಿನ ಸಂದರ್ಭ ನೀಡುವ ಹೇಳಿಕೆಯೇ ಅಪರಾಧ ನಿರ್ಣಯಕ್ಕೆ ಅಂತಿವಾಗದು: ಸುಪ್ರೀಂ

ನವದೆಹಲಿ: ಸಾಯುವ ಸಮಯದಲ್ಲಿ ನೀಡುವ ಹೇಳಿಕೆಗಳೇ ಅಪರಾಧ ನಿರ್ಣಯಕ್ಕೆ ಪ್ರಮುಖವಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ಇಂತಹ ನಿರ್ಣಯಗಳನ್ನು ಕೈಗೊಳ್ಳುವ ಸಂದರ್ಭದಲ್ಲಿ ನ್ಯಾಯಾಲಯಗಳು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹೇಳಿಕೆಯ ನಿಖರತೆಗೆ ಸಂಬಂಧಿಸಿದಂತೆ ಸಂಶಯವಿದ್ದು ಕೊಲೆ ಪ್ರಕರಣದಲ್ಲಿ ಸಾಯುವ ಮುನ್ನ ಸಂತ್ರಸ್ತರು ನೀಡುವ ಹೇಳಿಕೆ ಆರೋಪಿಯ ಶಿಕ್ಷೆಗೆ ಏಕೈಕ ಆಧಾರವಾಗಿರಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

2014ರಲ್ಲಿ ಉತ್ತರಪ್ರದೇಶದಲ್ಲಿ ನಡೆದಿದ್ದ ಮೂವರ ಹತ್ಯೆ ಪ್ರಕರಣದಲ್ಲಿ ವ್ಯಕ್ತಿಯೋರ್ವನಿಗೆ ತಪ್ಪಿತಸ್ಥನೆಂದು ಪರಿಗಣಿಸಿ ಗಲ್ಲು ಶಿಕ್ಷೆ ವಿಧಿಸಲಾಗಿತ್ತು. ಇರ್ಫಾನ್ ತನ್ನ ಇಬ್ಬರು ಸಹೋದರರು ಮತ್ತು ಅವನ ಮಗನನ್ನು ಕೊಲೆ ಮಾಡಿದ ಆರೋಪದಲ್ಲಿ ಶಿಕ್ಷೆಗೊಳಗಾದ್ದನು. ಅವರು ಮಲಗಿದ್ದಾಗ ಬೆಂಕಿ ಹಚ್ಚಿ ಕೊಠಡಿಗೆ ಬೀಗ ಹಾಕಿದ್ದರು ಎನ್ನಲಾಗಿದೆ. ಇರ್ಫಾನ್ ಎರಡನೇ ಮದುವೆಯಾಗುವ ಇಚ್ಛೆಗೆ ಭಿನ್ನಾಭಿಪ್ರಾಯವೇ ಕಾರಣ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

Advertisement

ಇನ್ನು ನೆರೆಹೊರೆಯವರು ಮತ್ತು ಇತರ ಕುಟುಂಬ ಸದಸ್ಯರು ಮೂವರನ್ನೂ ರಕ್ಷಿಸಲು ಪ್ರಯತ್ನಿಸಿದ್ದರು. ಆದರೆ ಅಂತಿಮವಾಗಿ ಆಸ್ಪತ್ರೆಯಲ್ಲಿ ಅವರು ಸಾವನ್ನಪ್ಪಿದರು. ಈ ಮಧ್ಯೆ ಪೊಲೀಸರು ಮೂರು ಬಲಿಪಶುಗಳಲ್ಲಿ ಇಬ್ಬರ ಮರಣದಂಡನೆ ಹೇಳಿಕೆಗಳನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದ್ದರು. ಇದು ಪ್ರಕರಣಕ್ಕೆ ಮುಖ್ಯ ಆಧಾರವಾಯಿತು. ಇಬ್ಬರು ಸಾಯುವ ಮುನ್ನ ನೀಡಿದ್ದ ಹೇಳಿಕೆ ಆಧಾರದ ಮೇಲೆ, ಸೆಷನ್ಸ್ ನ್ಯಾಯಾಲಯವು ಶಿಕ್ಷೆಗೆ ವಿಧಿಸಿತ್ತು. ನಂತರ ಅಲಹಾಬಾದ್ ಹೈಕೋರ್ಟ್ 2018ರಲ್ಲಿ ಈ ತೀರ್ಪನ್ನು ಎತ್ತಿಹಿಡಿದಿತ್ತು.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement