ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT Karnataka) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ. ಒಟ್ಟು 112 ಹುದ್ದೆಗಳು ಖಾಲಿ ಇವೆ. ಸೆಪ್ಟೆಂಬರ್ 6ರೊಳಗೆ ಅರ್ಜಿ ಸಲ್ಲಿಸಬೇಕು.
ಉದ್ಯೋಗ ಸ್ಥಳ: ಸುರತ್ಕಲ್.
ಯಾವೆಲ್ಲ ಹುದ್ದೆಗಳು?
ಸೂಪರಿಂಟೆಂಡೆಂಟ್ -4, ಟೆಕ್ನಿಷಿಯನ್- 18, ಸೀನಿಯರ್ ಅಸಿಸ್ಟೆಂಟ್- 11, ಟೆಕ್ನಿಷಿಯನ್- 35, ಜೂನಿಯರ್ ಅಸಿಸ್ಟೆಂಟ್- 2, ಆಫೀಸ್ ಅಟೆಂಡೆಂಟ್/ ಲ್ಯಾಬ್ ಅಟೆಂಡೆಂಟ್- 21 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ
ಸೂಪರಿಂಟೆಂಡೆಂಟ್ – ಪದವಿ, ಸ್ನಾತಕೋತ್ತರ ಪದವಿ, ಟೆಕ್ನಿಷಿಯನ್- 12ನೇ ತರಗತಿ, ಡಿಪ್ಲೊಮಾ, ITI, ಸೀನಿಯರ್ ಅಸಿಸ್ಟೆಂಟ್- 12ನೇ ತರಗತಿ, ಟೆಕ್ನಿಷಿಯನ್- 12ನೇ ತರಗತಿ, ಡಿಪ್ಲೊಮಾ, ಜೂನಿಯರ್ ಅಸಿಸ್ಟೆಂಟ್- 12ನೇ ತರಗತಿ, ಆಫೀಸ್ ಅಟೆಂಡೆಂಟ್/ ಲ್ಯಾಬ್ ಅಟೆಂಡೆಂಟ್- 12ನೇ ತರಗತಿ.
ವೇತನ(ಮಾಸಿಕ)
ಸೂಪರಿಂಟೆಂಡೆಂಟ್ – 9,300-34,800 ರೂ., ಟೆಕ್ನಿಷಿಯನ್- 5,200-20,200 ರೂ., ಸೀನಿಯರ್ ಅಸಿಸ್ಟೆಂಟ್- 5,200-20,200 ರೂ., ಟೆಕ್ನಿಷಿಯನ್- ಮಾಸಿಕ 5,200-20,200 ರೂ., ಜೂನಿಯರ್ ಅಸಿಸ್ಟೆಂಟ್-5,200-20,200 ರೂ., ಆಫೀಸ್ ಅಟೆಂಡೆಂಟ್/ ಲ್ಯಾಬ್ ಅಟೆಂಡೆಂಟ್- ಮಾಸಿಕ ₹ 5,200-20,200 ರೂ.
ಎಸ್.ಸಿ. /ಎಸ್.ಟಿ. /ಪಿ.ಡಬ್ಲ್ಯು.ಡಿ. ಅಭ್ಯರ್ಥಿಗಳು- 500 ರೂ., ಸಾಮಾನ್ಯ/ ಒ.ಬಿ.ಸಿ. ಅಭ್ಯರ್ಥಿಗಳು- 1,000 ರೂ. ಅರ್ಜಿ ಶುಲ್ಕ ಆನ್ ಲೈನ್ ಮೂಲಕ ಪಾವತಿಸಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆ, ಸ್ಕಿಲ್ ಟೆಸ್ಟ್, ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ. https://crenit.samarth.ac.in/index.php/site/landing-page ಮೂಲಕ ಅರ್ಜಿ ಸಲ್ಲಿಸಿ.