ಪಾಕಿಸ್ತಾನ: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಮ್ರಾನ್ಖಾನ್ನನ್ನು ಇಸ್ಲಾಮಾಬಾದ್ನಲ್ಲಿ ಬಂಧಿಸಲಾಗಿದೆ, ಇಸ್ಲಾಮಾಬಾದ್ನಲ್ಲಿ ಪಾಕಿಸ್ತಾನ ರೇಂಜರ್ಸ್ ಇಮ್ರಾನ್ ಖಾನ್ರನ್ನು ವಶಕ್ಕೆ ಪಡೆದುಕೊಂಡಿದೆ.
ಇಲ್ಲಿನ ಹೈಕೋರ್ಟ್ ಹೊರಗಡೆ ಪೊಲೀಸರು ಇಮ್ರಾನ್ ಖಾನ್ ಅವರನ್ನು ಬಂಧಿಸಿದ್ದಾರೆ ಎಂದು ಪಿಟಿಐ ಮುಖಂಡ ಮುಸ್ರಾತ್ ಚೀಮಾ ಖಚಿತಪಡಿಸಿದ್ದಾರೆ ಎಂದು ಐಎಎನ್ಎಸ್ ವರದಿ ಮಾಡಿದೆ.
ಇಮ್ರಾನ್ ಖಾನ್ ಇಂದು ಹೈಕೋರ್ಟ್ಗೆ ಹಾಜರಾಗಿದ್ದರು ಈ ವೇಳೆ ಅವರನ್ನು ಬಂಧಿಸಲಾಗಿದೆ ಎಂದು ಇಮ್ರಾನ್ ಖಾನ್ ಪರ ವಕೀಲ ಫೈಸಲ್ ಚೌಧರಿ ಕೂಡ ದೃಢಪಡಿಸಿದ್ದಾರೆ .