ಮುಂಬೈ: ಬಾಲಿವುಡ್ ನಟ ಆಮೀರ್ ಖಾನ್ ಅವರ ಪುತ್ರಿ ಇರಾ ಖಾನ್ ಕಳೆದ ವರ್ಷ ನವೆಂಬರ್ ನಲ್ಲಿ ನೂಪುರ್ ಶಿಖಾರೆ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು,ಅಕ್ಟೋಬರ್ 3ರಂದು ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಅಕ್ಟೋಬರ್ 3ರಂದು ಈ ಜೋಡಿ ರಿಜಿಸ್ಟರ್ ಮದುವೆ ಆಗಿ ಆ ನಂತರ ಉದಯಪುರದಲ್ಲಿ ಸಂಪ್ರದಾಯಿಕವಾಗಿ ಸಪ್ತಪದಿ ತುಳಿಯಲಿದೆ.
ಇನ್ನು ಒಟ್ಟು ಮೂರು ದಿನಗಳ ಕಾಲ ಈ ಮದುವೆ ನಡೆಯಲಿದ್ದು, ಮದುವೆಗೆ ಖ್ಯಾತ ತಾರೆಗಳು ಆಗಮಿಸಲಿದ್ದು, ಆ ಪಟ್ಟಿ ಕೂಡ ಸಿದ್ಧವಾಗಿದೆಯಂತೆ.
ಇರಾ ಖಾನ್ ಮತ್ತು ನೂಪುರ್ ಶಿಖಾರೆ ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದು, ಈಗ ಹಸೆಮಣೆ ಏರಲು ಸಜ್ಜಾಗಿದ್ದಾರೆ.