ನವದೆಹಲಿ: ನಿಫಾ ವೈರಸ್ ಸೋಂಕಿನ ಪ್ರಕರಣಗಳಲ್ಲಿ ಮರಣ ಪ್ರಮಾಣವು ಕೋವಿಡ್-19 ಸೋಂಕಿಗಿಂತ ಹೆಚ್ಚು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಹಾನಿರ್ದೇಶಕ ರಾಜೀವ್ ಬಹ್ಲ್ ಹೇಳಿದ್ದಾರೆ. ಕೋವಿಡ್-19 ಮರಣ ಪ್ರಮಾಣವು 2ರಿಂದ 3% ಹೊಂದಿದ್ದರೆ, ನಿಫಾ ಸಾವಿನ ಪ್ರಮಾಣ 40-70% ರಷ್ಟಿದೆ. ಹೆಚ್ಚಿನ ಮರಣ ಸಾಧ್ಯತೆಯನ್ನು ಹೊಂದಿದ್ದರೂ, ಹಿಂದಿನ ಹರಡುವಿಕೆ ಪ್ರಮಾಣ ಚಿಕ್ಕದಾಗಿ, ಅಲ್ಪಾವಧಿಯದಾಗಿತ್ತು ಎಂದು ರಾಜೀವ್ ಬಹ್ಲ್ ತಿಳಿಸಿದ್ದಾರೆ. ಇದುವರೆಗೆ ಆರು ನಿಫಾ ವೈರಸ್ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಇಬ್ಬರನ್ನು ಬಲಿ ತೆಗೆದುಕೊಂಡಿದೆ. ಸದ್ಯಕ್ಕೆ ಪರಾವೆಗಳನ್ನು ಗಮನಿಸಿದರೆ ನಿಫಾ ವೈರಸ್ ಆರ್ಭಟ ಕೇರಳದ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಮಾತ್ರ ಸೀಮಿತವಾಗಿದೆ ಎಂದು ಸೂಚಿಸುತ್ತದೆ ಎಂದು ರಾಜೀವ್ ಬಹ್ಲ್ ಹೇಳಿದ್ದಾರೆ.