ಬಂಟ್ವಾಳ ‌ನಗರ ಠಾಣೆ ಪೋಲೀಸರ ಭರ್ಜರಿ ಬೇಟೆ-ಚಿನ್ನಾಭರಣ,ವಾಹನ ಸೇರಿ 15,56,000 ಮೌಲ್ಯದ ಸೊತ್ತು ವಶ..!`

ನಗರ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ ,ಹಗಲು ವೇಳೆ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧಿಸಿ ,ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಬಂಟ್ವಾಳ : ಬಂಟ್ವಾಳ ‌ನಗರ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿದ್ದಾರೆ ,ಹಗಲು ವೇಳೆ ಮನೆಗೆ ನುಗ್ಗಿ ಕಳವು ಮಾಡುತ್ತಿದ್ದ ಇಬ್ಬರು ಕಳ್ಳರ ಬಂಧಿಸಿ ,ಲಕ್ಷಾಂತರ ರೂ ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಮಂಗಳೂರಿನ ಕಸಬಾ ಬೇಂಗ್ರೆ ನಿವಾಸಿ ಫರಾಜ್ (27 ) ಹಾಗೂ ಸುರತ್ಕಲ್ ತಾಲೂಕು ಚೊಕ್ಕಬೆಟ್ಟುವಿನ ತೌಸಿಫ್ ಅಹಮ್ಮದ್ (34) ಬಂಧಿತ ಆರೋಪಿಗಳಾಗಿದ್ದಾರೆ.

Advertisement

ಆರೋಪಿಗಳಿಂದ ಒಟ್ಟು ರೂ. 12,23,000/- ಮೌಲ್ಯದ 223ಗ್ರಾಂ ಚಿನ್ನಾಭರಣ ಮತ್ತು ರೂ 3000/- ಮೌಲ್ಯದ ಬೆಳ್ಳಿ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 3,30,000/- ಮೌಲ್ಯದ ಮಹೀಂದ್ರ ಝೈಲೋ ಕಾರು ಮತ್ತು ಮೋಟಾರ್ ಸೈಕಲ್ ಸೇರಿದಂತೆ ಒಟ್ಟು ರೂ 15,56,000/- ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ನಿರ್ದೇಶನದಂತೆ ಇನ್ಸ್ ಪೆಕ್ಟರ್ ನಾಗರಾಜ್ ನೇತೃತ್ವದಲ್ಲಿ ಎಸ್.ಐ.ರಾಮಕೃಷ್ಣ ಅವರ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.

ಕೆಲವೊಂದು ಸಂಶಯಗಳ ಮೇಲೆ ಕಳ್ಳರ ಜಾಲನ್ನು ಹಿಡಿದು ರಾಮಕೃಷ್ಣ ಅವರ ತಂಡ ಕಳ್ಳರ ಪತ್ತೆಗಾಗಿ ಅವಿರತವಾದ ಶ್ರಮವಹಿಸಿ ಕೊನೆಗೂ ಕಳವು ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳ ಪೈಕಿ ಫರಾಜ್ ಎಂಬಾತನ ವಿರುದ್ಧ ಮಂಗಳೂರು ಉತ್ತರ ಪೊಲೀಸ್ ಠಾಣೆ ಹಾಗೂ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕಳ್ಳತನ ಮಾಡಿದ್ದ ಪ್ರಕರಣಗಳು ಈ ಹಿಂದೆ ದಾಖಲಾಗಿದ್ದುವು. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಎಸ್‌.ಪಿ.ಸಿ.ಬಿ‌.ರಿಷ್ಯಂತ್ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ವಿವರ :

ಬಂಟ್ವಾಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಂಟ್ವಾಳ ತಾಲೂಕು ಸಜಿಪ ಮುನ್ನೂರು ಗ್ರಾಮದ ದೇವಮಾತ ಕಾಂಪ್ಲೆಕ್ಸ್‌ನಲ್ಲಿ ವಾಸವಿರುವ ಮೈಕಲ್ ಡಿಸೋಜಾ ಎಂಬವರ ಮನೆಯ ಎದುರಿನ ಬಾಗಿಲಿನ ಡೋರ್‌ನ್ನು ಸೆ. 01 ರಂದು ಕಳ್ಳರು ಮುರಿದು ಒಳ ಪ್ರವೇಶಿಸಿ ಮನೆಯ ಕೋಣೆಯೊಳಗಿದ್ದ ಗೋಡ್ರೆಜ್‌ಗಳ ಬಾಗಿಲುಗಳನ್ನು ಮುರಿದು ಒಟ್ಟು 115 ಗ್ರಾಂ ತೂಕದ ಸುಮಾರು 5,36,000/- ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ಸುಮಾರು 3,000/- ರೂಪಾಯಿ ಮೌಲ್ಯದ ಬೆಳ್ಳಿಯ ಸಾಮಾಗ್ರಿಯನ್ನು ಕಳವು ಮಾಡಿದ ಘಟನೆ ನಡೆದಿತ್ತು‌.

ಈ ಬಗ್ಗೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ಕಳವಾದ ಸೊತ್ತುಗಳನ್ನು ಪತ್ತೆ ಮಾಡಿಕೊಡಬೇಕಾಗಿ ಕೋರಿ ಮೈಕಲ್ ಡಿಸೋಜಾ ಎಂಬವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಬಂಟ್ವಾಳ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಡಿ.ವೈ.ಎಸ್.ಪಿ.ಪ್ರತಾಪ್ ಸಿಂಗ್ ಥೋರಾಟ್ ಅವರ ನಿರ್ದೇಶನದಂತೆ ಇನ್ಸ್ ಪೆಕ್ಟರ್ ನಾಗರಾಜ್ ನೇತೃತ್ವದಲ್ಲಿ ಎಸ್.ಐ.ರಾಮಕೃಷ್ಣ ಅವರ ತಂಡವನ್ನು ರಚಿಸಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.

ಕೆಲವೊಂದು ಸಂಶಯಗಳ ಮೇಲೆ ಕಳ್ಳರ ಜಾಲನ್ನು ಹಿಡಿದು ರಾಮಕೃಷ್ಣ ಅವರ ತಂಡ ಕಳ್ಳರ ಪತ್ತೆಗಾಗಿ ಅವಿರತವಾದ ಶ್ರಮವಹಿಸಿ ಕೊನೆಗೂ ಕಳವು ಆರೋಪಿಗಳ ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಕಳ್ಳರು ತನಿಖೆಯ ವೇಳೆ ಬಾಯಿಬಿಟ್ಟಂತೆ ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳವಾಗಿದ್ದ ಚಿನ್ನಾಭರಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳ ಪತ್ತೆ ಕಾರ್ಯದಲ್ಲಿ ಎಸ್.ಪಿ. ಸಿ.ಬಿ ರಿಷ್ಯಂತ್, ಹೆಚ್ಚುವರಿ ಎಸ್.ಪಿ. ಧರ್ಮಪ್ಪ ಎನ್. ಎಂ. ಡಿ.ವೈ.ಎಸ್.ಪಿ. ಪ್ರತಾಪ್‌ ಸಿಂಗ್ ಥೋರಾಟ್ ನಿರ್ದೇಶನದಂತೆ ಪೋಲಿಸ್ ಇನ್ಸ್ ಪೆಕ್ಟರ್ ನಾಗರಾಜ್ ಹೆಚ್.ಇ.ಅವರ ನೇತ್ರತ್ವದಲ್ಲಿ ಬಂಟ್ವಾಳ ನಗರ ಠಾಣೆಯ ಎಸ್.ಐ.ರಾಮಕೃಷ್ಣ ಅಪರಾಧ ವಿಭಾಗದ ಎಸ್.ಐ‌ ಕಲೈಮಾರ್, ಎ.ಎ ಸ್.ಐ ನಾರಾಯಣ, ಹೆಡ್ ಕಾನ್‌ಸ್ಟೇಬಲ್‌ಗಳಾದ ಇರ್ಷಾದ್ ಪಿ. ರಾಜೇಶ್, ಮನೋಹರ, ಕಾನ್‌ಸ್ಟೇಬಲ್‌ಗಳಾದ ಉಮೇಶ್ ಹಿರೇಮಠ, ರಂಗನಾಥ್ ಆರೋಪಿ ಹಾಗೂ ಜಿಲ್ಲಾ ಬೆರಳಚ್ಚು ಘಟಕದ ಸಚಿನ್ ಮತ್ತು ಉದಯ ಹಾಗೂ ಜಿಲ್ಲಾ ಗಣಕಯಂತ್ರ ಕೇಂದ್ರದ ದಿವಾಕರ ಮತ್ತು ಸಂಪತ್‌ರವರು ಆರೋಪಿ ಪತ್ತೆ ಬಗ್ಗೆ ಸಹಕರಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯವನ್ನು ಜಿಲ್ಲಾ ಎಸ್‌.ಪಿ.ಸಿ.ಬಿ‌.ರಿಷ್ಯಂತ್ ಶ್ಲಾಘಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement