ಮುಂಬೈ: ಕನ್ನಡದ ಪವರ್ ಚಿತ್ರದ ನಟಿ ತ್ರಿಷಾ ಕೃಷ್ಣನ್ ತಮ್ಮ ಫ್ಯಾನ್ಸ್‌ಗೆ ಸಿಹಿ ಸುದ್ದಿ ಕೊಡಲು ಸಜ್ಜಾಗಿದ್ದಾರೆ. ಮಲಯಾಳಂ ಖ್ಯಾತ ನಿರ್ಮಾಪಕನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ. ಈ ಸುದ್ದಿ ಕಾಲಿವುಡ್ ರಂಗದಲ್ಲಿ ಗಾಸಿಪ್ ಆಗಿದೆ.
40 ವರ್ಷದ ನಟಿ ತ್ರೀಷಾ ಮದುವೆ ಸಂಭ್ರಮದಲ್ಲಿ ಇದ್ದಾರೆ. ಮಲಯಾಳಂನ ಖ್ಯಾತ ನಿರ್ಮಾಪಕನ ಜೊತೆ ತ್ರಿಷಾ ಎಂಗೇಜ್ ಆಗಿದ್ದು, ಸದ್ಯದಲ್ಲೇ ದಾಂಪತ್ಯ ಜೀವನಕ್ಕೆ ನಟಿ ಕಾಲಿಡಲಿದ್ದಾರೆ ಎನ್ನಲಾಗ್ತಿದೆ. ಆದರೆ ಮದುವೆಯಾಗುವ ಗಂಡು ಯಾರು ಅನ್ನುವ ಮಾಹಿತಿ ರಿವೀಲ್ ಆಗಿಲ್ಲ.
ಈಗಾಗಲೇ ಇಬ್ಬರ ಮದುವೆಗೆ ಗುರುಹಿರಿಯರ ಸಮ್ಮತಿ ಕೂಡ ಸಿಕ್ಕಿದೆ ಎನ್ನಲಾಗಿದೆ. ತನ್ನನ್ನು ಇಷ್ಟಪಡುವ ವ್ಯಕ್ತಿಯ ಜೊತೆ ತ್ರಿಷಾ ಮದುವೆಯಾಗಲು ನಿರ್ಧರಿಸಿದ್ದಾರಂತೆ. ಈ ಬಗ್ಗೆ ಸದ್ಯದಲ್ಲೇ ಅಧಿಕೃತ ಮಾಹಿತಿ ಹೊರಬೀಳಲಿದೆ. 2015ರಲ್ಲಿ ಉದ್ಯಮಿ ವರುಣ್ ಜೊತೆ ಅದ್ದೂರಿಯಾಗಿ ನಿಶ್ಚಿತಾರ್ಥವಾಗಿತ್ತು. ಆದರೆ ವೈಯಕ್ತಿಕ ಕಾರಣ ವರುಣ್ ಜೊತೆಗಿನ ಸಂಬಂಧ ಮುರಿದು ಬಿತ್ತು.