ಮನೆಯಲ್ಲಿ ಅಕ್ವೇರಿಯಂ ಯಾವ ದಿಕ್ಕಿನಲ್ಲಿ ಇಟ್ಟರೆ ಶುಭವಾಗುತ್ತದೆ? – ಯಾವ ಮೀನುಗಳನ್ನು ಸಾಕಬೇಕು?ಎಲ್ಲಾ ಪ್ರಶ್ನೆಗೆ ಉತ್ತರ ಇಲ್ಲಿದೆ…

ಮನೆಯಲ್ಲಿ ಯಾವುದೇ ವಸ್ತುಗಳನ್ನ ಇಡುವಾಗ ಅಲಂಕಾರಿಕವಾಗಿ ಮಾತ್ರವಲ್ಲದೇ ಅದರ ಪ್ರಯೋಜನಗಳ ಬಗ್ಗೆ ಸಹ ತಿಳಿದುಕೊಂಡಿರಬೇಕು. ಹಾಗೆಯೇ, ಮುಖ್ಯವಾಗಿ ಅದರ ವಾಸ್ತು ನಿಯಮಗಳನ್ನು ಸಹ ನಾವು ಫಾಲೋ ಮಾಡಬೇಕು. ಹಾಗಾದ್ರೆ ಮನೆಯಲ್ಲಿ ಅಕ್ವೇರಿಯಂ ಇಡಲು ಸರಿಯಾದ ದಿಕ್ಕು ಯಾವುದು..? ಮನೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ದಿಕ್ಕಿನಲ್ಲಿಟ್ಟರೆ ಒಳ್ಳೆಯದು

ವಾಸ್ತುಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಮೀನಿನ ಅಕ್ವೇರಿಯಂ ಇಡಬೇಕು. ಇದರಿಂದ ಹೆಚ್ಚಿನ ಸಂಪತ್ತು, ಸಕಾರಾತ್ಮಕತೆ, ಸಮೃದ್ಧಿ ದೊರಕುತ್ತದೆ. ಇದೇ ರೀತಿ ಮನೆಯ ಉತ್ತರ ಮತ್ತು ಪೂರ್ವದಲ್ಲಿಯೂ ಇಡಬಹುದು. ಮನೆಯಲ್ಲಿ ಸಂಬಂಧದಲ್ಲಿ ಪ್ರೀತಿ, ಅನುರಾಗ ಬಯಸಿದರೆ ಮನೆಯ ಮುಖ್ಯ ದ್ವಾರದ ಎಡಭಾಗದಲ್ಲಿ ಇರಿಸಿ. ಅಕ್ವೇರಿಯಂನಲ್ಲಿರುವ ಪ್ರಕಾಶಮಾನವಾದ ಹೂವುಗಳು ಮನೆಗೆ ಧನಾತ್ಮಕ ವೈಭವ ತರುತ್ತದೆ. ಅಡುಗೆಮನೆಯಲ್ಲಿ ಅಕ್ವೇರಿಯಂ ಇಡಬೇಡಿ.

ಮೀನಿನ ಅಕ್ವೇರಿಯಂ ಇಡುವಾಗ ಈ ವಾಸ್ತು ಸಲಹೆಗಳನ್ನು ಪಾಲಿಸಿ

  • ಮನೆಯಲ್ಲಿ ಧನಾತ್ಮಕ ಶಕ್ತಿಯನ್ನು ಉತ್ತೇಜಿಸಲು ನೀವು ಆಗಾಗ್ಗೆ ನೀರನ್ನು ಬದಲಾಯಿಸಬೇಕು. ನಿಂತ ನೀರು, ಅಶುದ್ಧ ನೀರು ಆರ್ಥಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕೆಟ್ಟದ್ದಾಗಿದೆ.
  • ಅಕ್ವೇರಿಯಂನಲ್ಲಿ ಪಾಚಿ ಬೆಳೆಯಲು ಅವಕಾಶ ಬಿಡಬೇಡಿ.
  • ಯಾವಾಗಲೂ ಬೆಸ ಸಂಖ್ಯೆಯ ಮೀನುಗಳು ಅಕ್ವೇರಿಯಂನಲ್ಲಿ ಇರಬೇಡಿ. ಒಂಬತ್ತು ಮ್ಯಾಜಿಕ್‌ ಸಂಖ್ಯೆಯನ್ನೂ ಹೊಂದಬಹುದು. ಎಂಟು ಗೋಲ್ಡ್‌ ಫಿಶ್‌ ಮತ್ತು ಒಂದು ಬ್ಲಾಕ್‌ ಫಿಶ್‌ ಹೊಂದಬಹುದು.
  • ಡ್ರ್ಯಾಗನ್‌ ಮತ್ತು ಗೋಲ್ಡನ್‌ ಮೀನುಗಳು ಮನೆಗೆ ಮಂಗಳಕರ.
  • ಮೀನುಗಳು ಆರೋಗ್ಯಕರವಾಗಿರಲಿ. ಉತ್ತಮ ಪೋಷಣೆ ನೀಡಿ.

ಫಿಶ್ ಗಳ ಆಯ್ಕೆ ಹೀಗಿರಲಿ

ಗೋಲ್ಡ್‌ಫಿಶ್‌, ಬಟರ್‌ಫ್ಲೈ ಕೊಯಿ, ಡ್ರಾಗನ್‌ ಫಿಶ್‌ ಅಥವಾ ಅರೊವನ, ಗುಪ್ಪಿ ಫಿಶ್‌, ಫ್ಲವರ್‌ಹಾರ್ನ್‌ ಫಿಶ್‌, ಏಂಜೆಲ್‌ ಫಿಶ್‌, ಕೊರಿ ಕ್ಯಾಟ್‌ಫಿಶ್‌, ಬ್ಲಾಕ್‌ಮೂರ್‌ ಇತ್ಯಾದಿ ಜಾತಿಯ ಮೀನುಗಳನ್ನು ಅಕ್ವೇರಿಯಂನಲ್ಲಿ ಸಾಕಬಹುದು.

Advertisement

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement