ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಪ್ರೀತಿಯ ಸಾಕು ನಾಯಿ ಮ್ಯಾಕ್ಸಿಮಸ್ ಇತ್ತೀಚೆಗೆ ಮೃತಪಟ್ಟಿದೆ. ಕುಟುಂಬದ ಭಾಗವೇ ಆಗಿದ್ದ ಶ್ವಾನದ ಮರಣ ಅರ್ಜುನ್ ಕಪೂರ್ ಗೆ ಸಾಕಷ್ಟು ನೋವು ತಂದಿದೆ. ಅವರು ಇನ್ಸ್ಟಾಗ್ರಾಮ್ ನಲ್ಲಿ ಮ್ಯಾಕ್ಸಿಮಸ್ ನ ಹಳೆ ಫೋಟೋಗಳನ್ನು ಹಂಚಿಕೊಂಡು ಭಾವುಕ ವಿದಾಯ ನುಡಿಗಳನ್ನು ಬರೆದಿದ್ದಾರೆ.
ನೆನಪು ಮೆಲುಕು ಹಾಕಿದ ನಟ
ಮ್ಯಾಕ್ಸಿಯಸ್ ಜೊತೆಗಿನ ಒಡನಾಟದ ನೆನಪುಗಳನ್ನು ಅರ್ಜುನ್ ಈ ಪೋಸ್ಟ್ ನಲ್ಲಿ ಹಂಚಿಕೊಂಡಿದ್ದಾರೆ. ಮ್ಯಾಕ್ಸಿಮಸ್ ಅರ್ಜುನ್ ಜೊತೆ ಮಲಗಿರುವುದು, ಅವರ ಸಹೋದರಿ ಅನ್ಶುಲಾ ಜೊತೆ ಆಟವಾಡುತ್ತಿರುವ ಫೋಟೋ ನೋಡಿ ನೆಟ್ಟಿಗರು ಭಾವುಕರಾಗಿದ್ದಾರೆ.
ಅರ್ಜುನ್ ಹೇಳಿದ್ದೇನು?
ಈ ಜಗತ್ತಿನ ಅತ್ಯುತ್ತಮ ಹುಡುಗ ನನ್ನ ಮ್ಯಾಕ್ಸಿಯಸ್. ಪ್ರೀತಿಯ, ಮುದ್ದಿನ, ಧೈರ್ಯವಂತ ಸಂಗಾತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನನ್ನ ಮತ್ತು ಅನ್ಶು ಬಳಿಯಿಂದ ಮ್ಯಾಕ್ಸಿಮಸ್ ನನ್ನು ಕಸಿದುಕೊಂಡಿದ್ದು ದೊಡ್ಡ ಆಘಾತ ತಂದಿದೆ. ಅವನಿಲ್ಲದೆ ಮನೆಯಲ್ಲಿ ಹೇಗಿರುವುದು ಎನ್ನುವುದೇ ತಿಳಿಯುತ್ತಿಲ್ಲ. ಸಾವು ಯಾವತ್ತೂ ಕ್ರೂರ. ಈ ಬಾರಿಯಂತೂ ಅದಕ್ಕಿಂತ ಭಿನ್ನವಾಗಿಲ್ಲ. ನನಗೆ ಮತ್ತು ಅನ್ಶುಗೆ ಇಷ್ಟು ದಿನ ಉತ್ತಮ ಸಂಗಾತಿಯಾಗಿ ಮುದ ನೀಡಿದ್ದಕ್ಕೆ ಧನ್ಯವಾದಗಳು ಎಂದು ಅರ್ಜುನ್ ಕಪೂರ್ ಇಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಪೋಸ್ಟ್ ಓದಿ ಅನೇಕರು ಭಾವುಕರಾಗಿದ್ದಾರೆ. ಸದ್ಯ ಈ ಪೊಸ್ಟ್ ವೈರಲ್ ಆಗಿದ್ದು ಅನೇಕರು ಮ್ಯಾಕ್ಸಿಮಸ್ ಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಬಾಲಿವುಡ್ ತಾರೆಗಳಾದ ಟೈಗರ್ ಶ್ರಾಫ್, ಆಥಿಯಾ ಶೆಟ್ಟಿ, ವಾಣಿ ಕಪೂರ್ ಮತ್ತಿತರರು ಸಾಂತ್ವನ ಹೇಳಿದ್ದಾರೆ.