ಕೆಲಸ ತೊರೆದ ಮಹಿಳೆ 8 ಸಾವಿರ ಕೋಟಿ ರೂ. ಮೌಲ್ಯದ ಕಂಪನಿಯ ಕಟ್ಟಿ ಬೆಳೆಸಿದರು

ಉತ್ತರಪ್ರದೇಶ: ಮೊಬಿಕ್ವಿಕ್ ಎಂಬ ಕಂಪನಿಯನ್ನು ಆರಂಭಿಸಿದ ಉಪಾಸನಾ ಟಾಕು ಎಂಬ ಮಹಿಳೆ ಅದನ್ನು 8000 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆಸಿದ ಪರಿ ಎಲ್ಲರಿಗೂ ಸ್ಫೂರ್ತಿದಾಯಕ. ಕೆರಿಯರ್‌ನಲ್ಲಿ ಯಶಸ್ಸು ಪಡೆಯಲು ಬಯಸುವವರು ಈ ಸಕ್ಸಸ್‌ ಸ್ಟೋರಿ ಇಲ್ಲಿದೆ.

ಉಪಸನಾ ಟಾಕು ಅವರು ಮೊಬಿಕ್ವಿಕ್ (MobiKwik) ಕಂಪನಿಯ ಆಡಳಿತ ಮಂಡಳಿಯ ಮುಖ್ಯಸ್ಥೆ ಮತ್ತು ಸಿಒಒ. ಮೊಬಿಕ್‌ವಿಕ್‌ ಎನ್ನುವ ಕಂಪನಿಯನ್ನು ತನ್ನ ಪತಿಯ ಜತೆ ಸೇರಿ ಉಪಸನಾ ಟಾಕು ಆರಂಭಿಸಿದರು. ಇವರು ಪಂಜಾಬ್‌ ಟೆಕ್ನಿಕಲ್‌ ಯೂನಿವರ್ಸಿಟಿಯಿಂದ ಎಂಜಿನಿಯರಿಂಗ್‌ ಪದವಿ ಪಡೆದಿದ್ದಾರೆ. ಸ್ಟಾನ್‌ಫೋರ್ಡ್‌ ಯೂನಿವರ್ಸಿಟಿಯಲ್ಲಿ ಮ್ಯಾನೇಜ್‌ಮೆಂಟ್‌ ಸೈನ್ಸ್‌ ಆಂಡ್‌ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇಶಾ ಅಂಬಾನಿ, ಜಯಂತಿ ಚೌಧರಿ ಸಾಲಿಗೆ ಸೇರುವ ಉಪಾಸನಾ ಟಾಕು ಅವರ ಯಶಸ್ಸಿನ ಹಿಂದೆ ಸುಂದರ ಕನಸಿದೆ. ಜತೆಗೆ, ಪತಿಯ ಪ್ರೋತ್ಸಾಹವೂ ಇದೆ. ವಿಶೇಷವೆಂದರೆ, ಫಿನ್‌ಟೆಕ್‌ ವಲಯದಲ್ಲಿ ಪ್ರಮುಖವಾಗಿ ಯಶಸ್ಸು ಪಡೆದಿರುವ ಮೊದಲ ಬಿಸ್ನೆಸ್‌ ವುಮೆನ್‌ ಸಾಲಿಗೆ ಉಪಸನಾ ಸೇರುತ್ತಾರೆ. ಉಪಸನಾ ಟಾಕು ಅವರು ಇಂದು ಮೊಬಿಕ್ವಿಕ್ ಕಂಪನಿಯ ಸಿಇಒ. ಇವರು ಹದಿನೇಳು ವರ್ಷಗಳಿಗೂ ಹೆಚ್ಚು ಕಾಲ ವಿವಿಧ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿದ್ದರು. ಅಮೆರಿಕದ ಪೇಮೆಂಟ್‌ ಕಂಪನಿ ಪೇಪಾಲ್‌ನಲ್ಲಿ ಪ್ರಾಡಕ್ಟ್‌ ಮ್ಯಾನೇಜರ್‌ ಆಗಿದ್ದರು. ಮೊದಲು ಇವರು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದರು. 2008ರಲ್ಲಿ ಮೊಬಿಕ್ವಿಕ್ ಎಂಬ ಕಂಪನಿಯನ್ನು ಆರಂಭಿಸುವ ಸಲುವಾಗಿ ಭಾರತಕ್ಕೆ ವಾಪಸ್‌ ಬಂದಿದ್ದರು.

Advertisement

ಇವರು ಭಾರತದಲ್ಲಿ ಉದ್ಯಮಗಳಿಗೆ ಇರುವ ಹಲವು ಸವಾಲುಗಳ ಕುರಿತೂ ಮಾತನಾಡಿದ್ದಾರೆ. ಭಾರತವು ಅದ್ಭುತ ಸಂಪತ್ತು ಹೊಂದಿದ್ದು, ಇಲ್ಲಿನ ಉದ್ಯಮ ಅವಕಾಶಗಳಲ್ಲಿ ಹಲವು ಸಂಭಾವ್ಯ ಅವಕಾಶಗಳು ಇವೆ ಎಂದು ಅವರು ಹೇಳಿದ್ದಾರೆ. ಜತೆಗೆ, ಇಲ್ಲಿ ಸಾಕಷ್ಟು ಸಮಸ್ಯೆಗಳೂ ಇವೆ ಎಂದು ಅವರು ಹೇಳಿದ್ದರು. ಆದರೆ, ಮಾರುಕಟ್ಟೆಗಳನ್ನು ಅನ್ವೇಷಣೆ ಮಾಡಿದಾಗ ತಮಗೆ ಭಾರತವೇ ಉದ್ಯಮಕ್ಕೆ ಸೂಕ್ತವಾದ ಸ್ಥಳವೆಂದು ಅನಿಸಿದೆ ಎಂದು ಅವರು ಹೇಳಿದ್ದರು.

ಆದರೆ, ಭಾರತದಲ್ಲಿ ಉದ್ಯಮ ಸ್ಥಾಪಿಸಲು ಅವರ ಕುಟುಂಬ ಮೊದಲು ಒಪ್ಪಿರಲಿಲ್ಲ. ಇಲ್ಲಿ ದೊಡ್ಡ ಕಂಪನಿ ಆರಂಭಿಸುವುದು ತುಂಬಾ ರಿಸ್ಕ್‌ ಎಂದು ಅಭಿಪ್ರಾಯಪಟ್ಟಿದ್ದರು.ಇವರ ಹೆತ್ತವರು ಕೂಡ ವಿದೇಶದಲ್ಲಿದ್ದಾರೆ. ತಂದೆ ಎರ್ಟೆರಿಯಾದಲ್ಲಿ ಯೂನಿವರ್ಸಿ ಆಫ್‌ ಆಸ್ಮರದಲ್ಲಿ ಫಿಸಿಕ್ಸ್‌ ಪ್ರೊಫೆಸರ್‌ ಆಗಿದ್ದರು. ಅಮ್ಮ ಸಂಗೀತಗಾರ್ತಿ ಆಫ್ರಿಕಾದಲ್ಲಿ ನೆಲೆಸಿದ್ದರು. ಇವರೆಲ್ಲರೂ ಭಾರತಕ್ಕೆ ಆಗಮಿಸಿದ್ದರು. ಪೇಪಾಲ್‌ ಬಿಟ್ಟು ತನ್ನ ಉದ್ಯಮ ಆರಂಭಕ್ಕೆ ದಿಟ್ಟ ಹೆಜ್ಜೆಯಿಟ್ಟರು. ಆದರೆ, ಇವರು ಮತ್ತೆ ಗ್ರಾಮೀಣ ಮಟ್ಟದ ಸುಧಾರಣೆಗೆ ಮುಂದಾದರು. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಗ್ರಾಮೀಣ ಮೈಕ್ರೊಫೈನಾನ್ಸ್‌ ಕಂಪನಿಯಲ್ಲಿ ಕೆಲಸ ಆರಂಭಿಸಿದರು.

2008ರಲ್ಲಿ ಬಿಪಿನ್ ಪ್ರೀತ್ ಸಿಂಗ್ ಜತೆ ಸೇರಿ ಮೊಬಿಕ್ವಿಕ್ ಕಂಪನಿ ಆರಂಭಿಸಿದರು. ಬಳಿಕ ಇವರಿಬ್ಬರು 2011ರಲ್ಲಿ ವಿವಾಹವಾದರು. ಪತ್ನಿಯ ಮಾತು ಕೇಳಿ ಕೆಲಸ ಬಿಟ್ಟರು. ಪತ್ನಿಯ ಸ್ಟಾರ್ಟಪ್‌ಗೆ ಸಾಥ್‌ ನೀಡಿದರು. ಅಲ್ಲಿಂದ ಹಲವು ವರ್ಷಗಳ ಕಾಲ ಈ ಕಂಪನಿಯು ಸಾಕಷ್ಟು ಏರಿಳಿತ ಕಂಡಿತು. ಇದೀಗ ದೊಡ್ಡ ಫಿನ್‌ಟೆಕ್‌ ಕಂಪನಿಯಾಗಿ ಬೆಳೆದಿದೆ.

ಇತ್ತೀಚಿನ ಆರ್ಥಿಕ ವರ್ಷದಲ್ಲಿ ಈ ಕಂಪನಿಯು 560 ಕೋಟಿ ರೂಪಾಯಿ ಆದಾಯ ಗಳಿಸಿತ್ತು. 2022-23ರ ತ್ರೈಮಾಸಿಕದಲ್ಲಿ ಕಂಪನಿ ಸಾಕಷ್ಟು ಪ್ರಗತಿ ದಾಖಲಿಸಿತು. ಇದೀಗ ಈ ಕಂಪನಿ 8 ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿದೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement