ಉದ್ಯೋಗಿಯೊಬ್ಬನಿಂದ ಆದ ಎಡವಟ್ಟಿನಿಂದ ಕಂಪೆನಿಯ ಮಾಹಿತಿ ಸೋರಿಕೆಯಾದ ಘಟನೆ ನಡೆದಿದೆ.ಮೈಕ್ರೋಸಾಫ್ಟ್ ಒಡೆತನದ ‘ಗಿಟ್‌ಹಬ್’ನ ಸುಮಾರು 32 ಟಿಬಿಯಷ್ಟು ಮಾಹಿತಿ ಅಂತರ್ಜಾಲ ದಲ್ಲಿ ಸೋರಿಕೆಯಾಗಿದೆ.
‘ಗಿಟ್‌ಹಬ್’ ಎಂಬುದು ಫೇಸ್ ರೆಕಗ್ನಿಶನ್‌ಗಾಗಿ ಎಐ ಸೌಲಭ್ಯವನ್ನು ಒದಗಿಸುವ ಸಂಸ್ಥೆಯಾಗಿದೆ. ಇದರ ಮಾಹಿತಿ ಸೋರಿಕೆಯಾಗಿರುವುದನ್ನು ಅಂತರ್ಜಾಲದಲ್ಲಿ ಕ್ಲೌಡ್ ಭದ್ರತೆಯನ್ನು ಒದಗಿಸುವ ‘ವಿಜ್’ ಪತ್ತೆಹಚ್ಚಿದೆ.
ಉದ್ಯೋಗಿಯೊಬ್ಬ ತಪ್ಪಾದ ಯುಆರ್‌ಎಲ್ ಸೃಷ್ಟಿ ಮಾಡಿದ ಕಾರಣದಿಂದ ಇಂಟರ್ನೆಟ್‌ನಲ್ಲಿ ಹುಡುಕಾಟ ನಡೆಸಿದವರಿಗೆ ಹೆಚ್ಚು ಮಾಹಿತಿಗಳು ಕಂಪೆನಿಯ ಸರ್ವರ್‌ನಲ್ಲಿ ಸಿಕ್ಕಿದೆ.
ಸುಮಾರು 32 ಟಿಬಿಯಷ್ಟು ಡಾಟಾ ಸೋರಿಕೆಯಾಗಿದ್ದು, ಇದರಲ್ಲಿ ಮೈಕ್ರೋಸಾಫ್ಟ್ ಸೇವೆಗಳ ಖಾಸಗಿ ಕೀಗಳು ಮತ್ತು 30 ಸಾವಿರಕ್ಕೂ ಹೆಚ್ಚು ಮೈಕ್ರೋಸಾಫ್ಟ್‌ನ ಟೀಮ್ ಮೆಸೇಜ್ ಸೇರಿದಂತೆ ಸಾಕಷ್ಟು ಖಾಸಗಿ ಮಾಹಿತಿಗಳು ಸೋರಿಕೆಯಾಗಿದೆ ಎಂದು ವಿಜ್ ಹೇಳಿದೆ.
ಈ ಸೋರಿಕೆಯಲ್ಲಿ ಯಾವುದೇ ಗ್ರಾಹಕರ ಡೇಟಾವನ್ನು ಬಹಿರಂಗಪಡಿಸಲಾಗಿಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.