ಹಾಂಗ್‌ಝೋ: ಚೀನಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಮೊದಲ ಚಿನ್ನದ ಪದಕವನ್ನು ಗೆದ್ದುಕೊಂಡಿದೆ. 10 ಮೀ. ರೈಫಲ್ ಸ್ಪರ್ಧೆಯಲ್ಲಿ ಭಾರತದ ಪುರುಷರ ತಂಡವು ಚಿನ್ನದ ಪದಕ ಗೆಲ್ಲುವುದರೊಂದಿಗೆ ವಿಶ್ವದಾಖಲೆ ನಿರ್ಮಿಸಿದೆ.
ವಿಶ್ವ ಚಾಂಪಿಯನ್ ರುದ್ರಂಕ್ಷ್ ಪಾಟೀಲ್, ಒಲಿಂಪಿಯನ್ ದಿವ್ಯಾಂಶ್ ಪನ್ವಾರ್ ಮತ್ತು ಐಶ್ವರಿ ಪ್ರತಾಪ್ ಸಿಂಗ್ ತೋಮರ್ ತಂಡ 1893.7 ಅಂಕ ಗಳಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಹಿಂದೆ ಚೀನಾ 1893.3 ಅಂಕ ಸಂಪಾದಿಸಿ ದಾಖಲೆ ಬರೆದಿತ್ತು.
ಪುರುಷರ ರೋಯಿಂಗ್‌ನಲ್ಲಿ ಭಾರತ ಕಂಚಿನ ಪದಕವನ್ನು ಗೆದ್ದುಕೊಂಡಿದೆ. ಜಸ್ವಿಂದರ್ ಸಿಂಗ್, ಭೀಮ್ ಸಿಂಗ್, ಪುನಿತ್ ಕುಮಾರ್ ಮತ್ತು ಆಶಿಶ್ ಅವರಿಂದ ತಂಡ ಮೂರನೇ ಸ್ಥಾನವನ್ನು ಪಡೆದುಕೊಂಡಿತು.
ಸದ್ಯ 1 ಚಿನ್ನ, 3 ಬೆಳ್ಳಿ, 5 ಕಂಚಿನ ಪದಕ ಗೆದ್ದಿರುವ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 27 ಚಿನ್ನ, 11 ಬೆಳ್ಳಿ, 5 ಕಂಚು ಸೇರಿ ಒಟ್ಟು 43 ಪದಕ ಗೆದ್ದಿರುವ ಚೀನಾ ಮೊದಲ ಸ್ಥಾನದಲ್ಲಿ ಮುಂದುವರಿದಿದೆ.