ಬಿಹಾರ: ಮೊಟ್ಟೆ ಉತ್ಪಾದನೆಗಾಗಿ 20,000 ಕೋಳಿಗಳನ್ನು ಸಾಕಿ ವರ್ಷಕ್ಕೆ 75 ಲಕ್ಷ ರೂ. ಸಂಪಾದಿಸುತ್ತಿರುವ ಯಶಸ್ವಿ ಉದ್ಯಮಿ ಬಿಹಾರ ಮೂಲದ ಮನೀಶ್ ಕುಮಾರ್ ಅವರ ಕಥೆ ಇದು.
ದೇಶದ ಖ್ಯಾತ ಉದ್ಯಮಿಗಳಲ್ಲಿ ಬಿಹಾರದ ಯುವ ರೈತ ಮನೀಶ್ ಕುಮಾರ್ ಕೂಡ ಒಬ್ಬರಾಗಿದ್ದು, ಅವರು ಕೋಳಿ ಉದ್ಯಮದಲ್ಲಿ ಯಶಸ್ವಿಯಾಗಿದ್ದಾರೆ.
20,000 ಕೋಳಿಗಳನ್ನು ಮೊಟ್ಟೆ ಉತ್ಪಾದನೆಗಾಗಿ ಮಾತ್ರ ಸಾಕಲಾಗಿದ್ದು, ಬಿಹಾರದ ಹಲವು ಜಿಲ್ಲೆಗಳು ಪ್ರತಿದಿನ ಮೊಟ್ಟೆ ವಿತರಣೆ ಮಾಡುತ್ತೇವೆ. ಕೋಳಿ ತಂದ ನಂತರ 20 ತಿಂಗಳವರೆಗೆ ಈ ವ್ಯವಹಾರವು ಕಾರ್ಯನಿರ್ವಹಿಸುತ್ತದೆ ಎಂದರು.
ಇನ್ನು ಕೋಳಿಗೆ ನಾಲ್ಕನೇ ತಿಂಗಳಲ್ಲಿ ಮೊಟ್ಟೆ ಉತ್ಪಾದನೆ ಪ್ರಾರಂಭವಾಗುತ್ತದೆ. ಮೊಟ್ಟೆಗಳನ್ನು ಉತ್ಪಾದಿಸುವುದನ್ನು ನಿಲ್ಲಿಸಿದಾಗ ಕೋಳಿಯನ್ನು ಮಾರಲಾಗುತ್ತದೆ. ಶುಚಿತ್ವವನ್ನು ನಿರ್ಲಕ್ಷಿಸಿದರೆ ಕೋಳಿಗಳು ರೋಗಕ್ಕೆ ತುತ್ತಾಗುವ ಸಂಭವ ಹೆಚ್ಚುತ್ತದೆ ಎಂದಿದ್ದಾರೆ.
ಇಪ್ಪತ್ತು ಸಾವಿರ ಕೋಳಿಗಳನ್ನು ಬಳಸಿ ದಿನಕ್ಕೆ 18 ರಿಂದ 19 ಸಾವಿರ ಮೊಟ್ಟೆಗಳನ್ನು ಉತ್ಪಾದಿಸಲಾಗುತ್ತದೆ. ನಂತರ ಅವುಗಳನ್ನು ಮಾರುಕಟ್ಟೆಗೆ ಹೋಗುವ ದರದಲ್ಲಿ ಮಾರಾಟ ಮಾಡಲಾಗುತ್ತದೆ ಎಂದು ಮನೀಶ್ ತಿಳಿಸಿದ್ದಾರೆ.