ದಸರಾ ಸಂಭ್ರಮದಲ್ಲಿ ಕೋಲ್ಕತ್ತಾ ರೆಸ್ಟೋರಂಟ್‌ಗಳು ಗಳಿಸಿದ್ದು ₹1,100 ಕೋಟಿ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ದಸರಾ ಹಬ್ಬವನ್ನು ದೀಪಾವಳಿಗಿಂತ ಹೆಚ್ಚು ಸಂಭ್ರಮದಿಂದ ಆಚರಿಸುವ ಪದ್ಧತಿ ಇದೆ. ಅದು ಅಲ್ಲಿನ ಸಂಸ್ಕೃತಿ ಹಾಗೂ ಪರಂಪರೆ. ಈ ವೇಳೆ ಕೋಲ್ಕತ್ತ ನಗರದ ಮಹಾಜನತೆ ಊಟ-ಉಪಹಾರಕ್ಕಾಗಿ ಸಿಕ್ಕಾಪಟ್ಟೆ ಖರ್ಚು ಮಾಡಿದ್ದಾರೆಂಬುದು ಅಂಕಿ-ಅಂಶಗಳ ಪ್ರಕಾರ ಗೊತ್ತಾಗಿದೆ. ದಸರಾ ಸಂಭ್ರಮದ ಕೇವಲ ಆರು ದಿನಗಳಲ್ಲಿ ಕೋಲ್ಕತ್ತಾದ ಹೈಫೈ ಡೈನಿಂಗ್ ಇರುವ ರೆಸ್ಟೋರಂಟ್‌ಗಳು ಗಳಿಸಿದ್ದು ಬರೋಬ್ಬರಿ ₹1,100 ಕೋಟಿ! ನಂಬಲು ಅಸಾಧ್ಯವಾದರೂ ಇದು ಸತ್ಯ. ಇನ್ನು ದಸರಾ ಸಂಭ್ರಮಕ್ಕಾಗಿಯೇ ಆಹಾರ ಪ್ರಿಯರನ್ನು ಆಕರ್ಷಿಸಲು ಕೋಲ್ಕತ್ತದ ರೆಸ್ಟೋರಂಟ್‌ಗಳ ಒಳಾಂಗಣವನ್ನು ವಿಶಿಷ್ಟವಾಗಿ ವಿನ್ಯಾಸಗೊಳಿಸಲಾಗಿತ್ತು. ಉಳಿದೆಲ್ಲ ಸಂದರ್ಭಕ್ಕಿಂತ ದಸರಾ ಸಂಭ್ರಮದ ಸಂದರ್ಭದಲ್ಲಿ ತರಹೇವಾರಿ ಖಾದ್ಯಗಳನ್ನು ಗ್ರಾಹಕರಿಗೆ ಪರಿಚಯಿಸಲಾಗಿತ್ತು. ಈ ಎಲ್ಲ ಕಾರಣಗಳಿಂದ ಕೋಲ್ಕತ್ತದ ಆಹಾರ ಪ್ರಿಯರು ರೆಸ್ಟೋರಂಟ್‌ಗಳಿಗೆ ಲಗ್ಗೆ ತಮ್ಮಿಷ್ಟದ ಭೂರಿ ಭೋಜನವನ್ನು ಭರ್ಜರಿಯಾಗಿ ಸವಿದಿದ್ದಾರೆ. ಇನ್ನು ಕಳೆದ ದಸರಾ ಹಬ್ಬಕ್ಕಿಂತ ಈ ಬಾರಿಯ ದಸರಾ ಹಬ್ಬದ ವೇಳೆ ರೆಸ್ಟೋರಂಟ್‌ಗಳು 20% ಹೆಚ್ಚು ಆದಾಯ ಗಳಿಸಿವೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement