ಕಾರವಾರ: ಪ್ಯಾಲಸ್ತೈನ್ ಮೇಲಿನ ಇಸ್ರೇಲ್ ದಾಳಿಯನ್ನು ಖಂಡಿಸಿ ಕ್ರಿಕೆಟ್ ಲೀಗ್ ಪಂದ್ಯಾವಳಿಯನ್ನು ರದ್ದು ಪಡಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ನಡೆದಿದೆ. ಕ್ರಿಕೆಟ್ ಪಂದ್ಯಾವಳಿಯನ್ನು ರದ್ದುಪಡಿಸಿರುವ ಮುಸ್ಲಿಮ್ ಯೂತ್ ಫೆಡರೇಶನ್, ಯುದ್ಧ ಮುಗಿಯುವವರೆಗೆ ಮದುವೆ, ಮನೋರಂಜನಾ ಖರ್ಚಿಗೆ ಮಿತಿ ಹೇರುವಂತೆ ಭಟ್ಕಳದ ಮುಸ್ಲಿಮರಿಗೆ ಕರೆ ನೀಡಿದೆ. ಐಪಿಎಲ್ ಮಾದರಿಯಲ್ಲಿ ಅವುಝ ಭಟ್ಕಳ ಕ್ರಿಕೆಟ್ ಲೀಗ್-5 ನವಂಬರ್ 3 ರಿಂದ ಒಂದು ತಿಂಗಳ ಕಾಲ ನಿಗದಿಯಾಗಿತ್ತಲ್ಲದೇ,ಕಳೆದ ತಿಂಗಳು 200 ಆಟಗಾರರನ್ನು ಗುರುತಿಸಿ ಹರಾಜು ಹಾಕಿ 12 ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಮುಸ್ಲಿಮರ ಹತ್ಯೆ ವಿರೋಧಿಸಿ ಕ್ರಿಕೆಟ್ ಪಂದ್ಯಾವಳಿ ರದ್ದುಗೊಳಿಸಲಾಗಿದ್ದು,ಹಣ ಉಳಿಸಿ ಪ್ಯಾಲಸ್ತೈನ್ ಗೆ ಸಹಾಯ ಮಾಡಲು ಭಟ್ಕಳದ ಮುಸ್ಲಿಮರಿಗೆ ಮುಸ್ಲಿಂ ಯೂತ್ ಫೆಡರೇಶನ್ ಸಂಘಟನೆ ಮನವಿ ಮಾಡಿದೆ.