ನವದೆಹಲಿ: ಭೂಕಂಪ ಪೀಡಿತ ನೇಪಾಳಕ್ಕೆ ಭಾರತವು ಭಾನುವಾರ ಸೇನಾ ಸಾರಿಗೆ ವಿಮಾನದಲ್ಲಿ ತುರ್ತು ಸಹಾಯ ಪ್ಯಾಕೇಜ್ ಕಳುಹಿಸಿದೆ. 10 ಕೋಟಿ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿಗಳಲ್ಲಿ ಔಷಧಗಳು, ವೈದ್ಯಕೀಯ ಉಪಕರಣಗಳು, ಟೆಂಟ್‌ಗಳು, ಹೊದಿಕೆಗಳು ಸೇರಿವೆ.
ನೇಪಾಳದಲ್ಲಿ ಸಂಭವಿಸಿದ 6.4 ತೀವ್ರತೆಯ ಭೂಕಂಪದಿಂದ 157 ಜನರು ಸಾವನ್ನಪ್ಪಿದ್ದಾರೆ. ಮೊದಲ ಪ್ರತಿಸ್ಪಂದಕರಾಗಿ ಸೇವೆ ಸಲ್ಲಿಸುತ್ತಿರುವ ಭಾರತವು ಭೂಕಂಪ ಪೀಡಿತ ಸಮುದಾಯಗಳಿಗೆ ಸಹಾಯ ಮಾಡಲು ಅಗತ್ಯ ಔಷಧಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ರವಾನಿಸಿದೆ. ಈ ಕ್ಷಿಪ್ರ ಪ್ರತಿಕ್ರಿಯೆಯು ಪ್ರಧಾನಿ ನರೇಂದ್ರ ಮೋದಿಯವರ “ನೆರೆಹೊರೆಯ ಮೊದಲ ನೀತಿ”ಯೊಂದಿಗೆ ಹೊಂದಿಕೆಯಾಗುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಬಿಕ್ಕಟ್ಟಿನ ಸಮಯದಲ್ಲಿ ತನ್ನ ನೆರೆಯ ರಾಷ್ಟ್ರಗಳನ್ನು ಬೆಂಬಲಿಸುವ ಭಾರತದ ಬದ್ಧತೆಯನ್ನು ಒತ್ತಿ ಹೇಳಿದರು. “ನೇಪಾಳದ ಭೂಕಂಪ ಪೀಡಿತ ಪ್ರದೇಶಗಳಿಗೆ ತುರ್ತು ಪರಿಹಾರ ನೆರವು ಒದಗಿಸುತ್ತಿದೆ. ಮೊದಲ ಪ್ರತಿಸ್ಪಂದಕರಾಗಿ, ಭಾರತವು ಔಷಧಿಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ತಲುಪಿಸುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ನೆರೆಹೊರೆಯ ಮೊದಲ ನೀತಿಯು ಕಾರ್ಯರೂಪದಲ್ಲಿದೆ” ಎಂದು EAM ಜೈಶಂಕರ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಹಿತಿ ನೀಡಿದ್ದಾರೆ.