ಪ್ಯಾಲೆಸ್ತೀನ್‌ ಕಾರ್ಮಿಕರ ಬದಲಿಗೆ ಭಾರತೀಯರ ನೇಮಕ-ಇಸ್ರೇಲ್‌

ಇಸ್ರೇಲ್‌: ಪ್ಯಾಲೆಸ್ತೀನ್‌ ಕಾರ್ಮಿಕರ ಜಾಗದಲ್ಲಿ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲು ಇಸ್ರೇಲ್‌ ನಿರ್ಧರಿಸಿದೆ.

ಇಸ್ರೇಲ್ ಸುಮಾರು ಒಂದು ಲಕ್ಷ ಭಾರತೀಯ ಕಾರ್ಮಿಕರನ್ನು ನೇಮಿಸಿಕೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಇತ್ತೀಚಿನ ಸಂಘರ್ಷದ ಹಿನ್ನೆಲೆ ಭಾರತಕ್ಕೆ ಆರ್ಥಿಕವಾಗಿ ಲಾಭದಾಯಕವಾಗಿದೆ.

ಸುಮಾರು 90,000 ಪ್ಯಾಲೆಸ್ತೀನಿಯನ್ ಕಾರ್ಮಿಕರ ಸ್ಥಳಾಂತರಕ್ಕೆ ಇಸ್ರೇಲ್‌ ಕ್ರಮಕೈಗೊಳ್ಳಲಿದೆ. ಯುದ್ಧದ ಬಳಿಕ ಪ್ಯಾಲೆಸ್ತೀನ್‌ ಕಾರ್ಮಿಕರ ಕೆಲಸದ ಪರವಾನಗಿಗಳನ್ನು ರದ್ದುಗೊಳಿಸಲಿದೆ.
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಅವರನ್ನು ಭೇಟಿ ಮಾಡಿ, ಭಯೋತ್ಪಾದನೆಯ ವಿರುದ್ಧ ಜಂಟಿ ನಿಲುವನ್ನು ಪ್ರತಿಪಾದಿಸಿದ್ದರು. ಅಲ್ಲದೇ ಬಿಕ್ಕಟ್ಟಿನ ವಿಚಾರದಲ್ಲಿ ಇಸ್ರೇಲ್‌ಗೆ ಭಾರತದ ದೃಢವಾದ ಬೆಂಬಲವನ್ನು ನೀಡಿದೆ.

Advertisement

ಹೀಗಾಗಿ ಭಾರತದಿಂದ ವಿದೇಶಕ್ಕೆ, ಅದರಲ್ಲೂ ಮಧ್ಯ ಪ್ರಾಚ್ಯಕ್ಕೆ ಉದ್ಯೋಗಕ್ಕಾಗಿ ತೆರಳುವವರ ಅವಕಾಶಗಳು ಇದರಿಂದ ಹೆಚ್ಚಲಿವೆ. ಇಸ್ರೇಲ್‌ನ ಈ ಹೊಸ ಆರ್ಥಿಕ ನೀತಿ ಪ್ಯಾಲೆಸ್ತೀನ್‌ಗೆ ನಷ್ಟವಾದರೆ, ಭಾರತಕ್ಕೆ ಲಾಭವಾಗಿದೆ ಎಂದು ಹೇಳಲಾಗುತ್ತಿದೆ. ವಾಣಿಜ್ಯ- ಆರ್ಥಿಕ ವಿಚಾರಗಳಲ್ಲಿ ಭಾರತ ಮತ್ತು ಇಸ್ರೇಲ್‌ ಹೆಚ್ಚು ನಿಕಟವಾಗಿದೆ.

ಇತ್ತಿಚೆಗೆ ಇಸ್ರೇಲ್- ಹಮಾಸ್ ಸಂಘರ್ಷವನ್ನು ತಕ್ಷಣವೇ ಕೊನೆಗೊಳಿಸಬೇಕೆಂದು ಮತದಾನದಲ್ಲಿ ಕರೆ ನೀಡಲಾಗಿತ್ತು. ಆದರೆ ಭಾರತದ ಆಯ್ಕೆಯು ಇಸ್ರೇಲ್‌ನೊಂದಿಗಿದ್ದು, ಅದರೊಂದಿಗೆ ಇನ್ನಷ್ಟು ಬಲವಾದ ಮೈತ್ರಿಯನ್ನು ಪ್ರತಿಬಿಂಬಿಸಿದೆ. ಭಾರತ-ಇಸ್ರೇಲಿ ಸಂಬಂಧಗಳು ವಿಶೇಷವಾಗಿ ವ್ಯಾಪಾರದ ಮೂಲಕ ಬಲಗೊಂಡಿವೆ.

 

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement