ಗುತ್ತಿಗೆ ಆಧಾರದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

 

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾನೂನು ಅಭಿರಕ್ಷಕ ಕಚೇರಿಯಲ್ಲಿ ಆಡಳಿತ ಸಹಾಯಕ/ಗುಮಾಸ್ತ, ಸ್ವಾಗತಕಾರರು-ವ-ಡಾಟಾ ಎಂಟ್ರಿ ಆಪರೇಟರ್ ಮತ್ತು ಜವಾನ ಹುದ್ದೆಗಳನ್ನು ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕ ಅವಧಿಗೆ (6 ತಿಂಗಳು) ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಡಿಸೆಂಬರ್ 12 ಅರ್ಜಿ ಸಲ್ಲಿಸಲು ಕೊನೆಯ ದಿನ.

ಆಡಳಿತ ಸಹಾಯಕ/ಗುಮಾಸ್ತ 1 ಹುದ್ದೆ: ಆಡಳಿತ ಸಹಾಯಕ/ಗುಮಾಸ್ತ ಹುದ್ದೆಗೆ ಸರ್ಕಾರದಿಂದ ಮಾನ್ಯಗೊಂಡಂತಹ ಯಾವುದೇ ವಿಶ್ವವಿದ್ಯಾನಿಲಯದಿಂದ ಪದವಿ ವಿದ್ಯಾರ್ಹತೆ ಹಾಗೂ ಮೂಲ ಪದ ಸಂಸ್ಕರಣಾ ಕೌಶಲ್ಯಗಳು ಮತ್ತು ಕಾರ್ಯನಿರ್ವಹಿಸುವ ಸಾಮಥ್ರ್ಯ ಡೇಟಾ ಫೀಡ್ ಮಾಡಲು ಕಂಪ್ಯೂಟರ್ ಮತ್ತು ಕೌಶಲ್ಯಗಳು ಅರ್ಜಿಯ ಸರಿಯಾದ ಸೆಟ್ಟಿಂಗ್‍ನೊಂದಿಗೆ ಉತ್ತಮ ಬೆರಳಚ್ಚು ವೇಗ, ಉಕ್ತಲೇಖನ ತೆಗೆದುಕೊಳ್ಳುವ ಮತ್ತು ನ್ಯಾಯಾಲಯದಲ್ಲಿ ಪ್ರಸ್ತುತಿಗಾಗಿ ಕಡತಗಳನ್ನು ಸಿದ್ದಪಡಿಸುವ ಸಾಮಾಥ್ರ್ಯ ಕಡತಗಳ ನಿರ್ವಹಣೆ ಮತ್ತು ಸಂಸ್ಕರಣೆಯ ಜ್ಞಾನ ಹೊಂದಿರುವ ಅಭ್ಯರ್ಥಿಗಳಿಗೆ ಹಾಗೂ ಪ್ರಾಧಿಕಾರದಲ್ಲಿ ಕಾರ್ಯನಿರ್ವಹಿಸಲು ಆಸಕ್ತಿ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮಾಸಿಕ ರೂ.19000/- ವೇತನ ನೀಡಲಾಗುವುದು.

Advertisement

ಸ್ವಾಗತಕಾರರು-ವ-ಡಾಟಾ ಎಂಟ್ರಿ ಆಪರೇಟರ್ 1 ಹುದ್ದೆ: ವಿಶ್ವವಿದ್ಯಾನಿಲಯದಿಂದ ಪದವಿ ವಿದ್ಯಾರ್ಹತೆ ಹಾಗೂ ಅತ್ಯುತ್ತಮ ಮೌಖಿಕ ಮತ್ತು ಲಿಖಿತ ಸಂವಹನ ಕೌಶಲ್ಯಗಳು, ಪದ ಮತ್ತು ಡೇಟಾ ಸಂಸ್ಕರಣಾ ಸಾಮಥ್ರ್ಯಗಳು, ಟೆಲಿ ಸಂವಹನ ವ್ಯವಸ್ಥೆಗಳಲ್ಲಿ ಕೆಲಸ ಮಾಡುವ ಸಾಮಥ್ರ್ಯ, ಉತ್ತಮ ಟೈಪಿಂಗ್ ವೇಗದೊಂದಿಗೆ ಪ್ರಾವೀಣ್ಯತೆ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು. ಮಾಸಿಕ ರೂ.17271 ವೇತನ ನೀಡಲಾಗುವುದು.

ಜವಾನ 1 ಹುದ್ದೆ: ಜವಾನ ಹುದ್ದೆಗೆ ಎಸ್‍ಎಸ್‍ಎಲ್‍ಸಿ ಪಾಸಾಗಿರಬೇಕು. ಮಾಸಿಕ ರೂ.15202 ವೇತನ ನೀಡಲಾಗುವುದು.

ಅರ್ಜಿ ಸಲ್ಲಿಕೆ ನವೆಂಬರ್ 29 ರಿಂದ ಪ್ರಾರಂಭವಾಗಲಿದೆ. ಡಿಸೆಂಬರ್ 12 ಸಂಜೆ 5ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.   ಆಸಕ್ತರು ತಮ್ಮ ವೈಯಕ್ತಿಕ ವಿವರಗಳೊಂದಿಗೆ ಸ್ವ ಹಸ್ತಾಕ್ಷರದಿಂದ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ ಸೂಕ್ತ ದಾಖಲೆಗಳೊಂದಿಗೆ ಪಾಸ್ ಪೋರ್ಟ್ ಅಳತೆಯ 2 ಇತ್ತೀಚಿನ ಭಾವಚಿತ್ರಗಳೊಂದಿಗೆ ಅರ್ಜಿಯನ್ನು ಸದಸ್ಯ ಕಾರ್ಯದರ್ಶಿಗಳು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಚಿತ್ರದುರ್ಗ ಇವರಿಗೆ ಸಲ್ಲಿಸಬಹುದಾಗಿದೆ. ಅವಧಿ ಮುಗಿದ ನಂತರ ಬಂದ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಎಂ.ವಿಜಯ್ ತಿಳಿಸಿದ್ದಾರೆ.

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement