ತೆಲಂಗಾಣ: ಲಘು ವಿಮಾನವೊಂದು ಪತನಗೊಂಡು ಓರ್ವ ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗೆ 8 ಗಂಟೆ ಸುಮಾರಿಗೆ ತೆಲಂಗಾಣದ ಮೆದಕ್ ಎಂಬಲ್ಲಿ ನಡೆದಿದೆ.
ಮೆದಕ್ನ ತೂಪ್ರಾನ್ ಬಳಿ ಭಾರತೀಯ ವಾಯುಪಡೆಯ ತರಬೇತಿ ವಿಮಾನ ಪತನಗೊಂಡಿದ್ದು, ತರಬೇತಿ ನಿರತ ವಿಮಾನದಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ಕುರಿತು ಮಾಹಿತಿ ಲಭ್ಯವಾಗಿದೆ. ದುಂಡಿಗಲ್ ಏರ್ಪೋರ್ಟ್ಗೆ ಸೇರಿದ ತರಬೇತಿ ನಿರತ ವಿಮಾನ ಇದಾಗಿದೆ.
ವಿಮಾನ ಪತನಗೊಂಡಾಗ ಭಾರಿ ಬೆಂಕಿ ಕಾಣಿಸಿಕೊಂಡಿದ್ದು ವಿಮಾನ ಸಂಪೂರ್ಣ ಸುಟ್ಟು ಬೂದಿಯಾಗಿದೆ.
ಇನ್ನೂ ಈ ವಿಮಾನ ಪತನದ ದುರಂತದಲ್ಲಿ ಓರ್ವ ಪೈಲಟ್ ಮೃತಪಟ್ಟಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆದರೆ ಇನ್ನೊಬ್ಬ ಪೈಲಟ್ ಬಗ್ಗೆ ಮಾಹಿತಿ ಲಭಿಸದ ಹಿನ್ನೆಲೆ ಆತ ವಿಮಾನದಿಂದ ಜಿಗಿದಿದ್ದಾರೆಯೇ ಎಂಬುದು ಪೊಲೀಸರಿಗೆ ಖಚಿತ ಮಾಹಿತಿ ದೊರೆತಿಲ್ಲ.