ದೈವಾರಾಧನೆ ನಮ್ಮ ನೆಲದ ಸಂಸ್ಕೃತಿ ಅದಕ್ಕೆ ಅವಮಾನ ಮಾಡಬೇಡಿ –ರಿಷಬ್ ಶೆಟ್ಟಿ

ಬೆಂಗಳೂರು : ಕಾಂತಾರ ಸಿನೆಮಾದ ಹಾಡುಗಳಿಗೆ ದೈವದ ಅವಹೇಳನ ಮಾಡುವ ರೀತಿಯಲ್ಲಿ ರೀಲ್ಸ್ ಅಥವಾ ಕಾರ್ಯಕ್ರಮಗಳಲ್ಲಿ ಬಳಕೆ ಮಾಡುವುದರ ವಿರುದ್ದ ಕಾಂತಾರ ನಟ ರಿಷಬ್ ಶೆಟ್ಟಿ ಅಸಮಧಾನ ವ್ಯಕ್ತಪಡಿಸಿದ್ದು. ಈ ರೀತಿ ಮಾಡುವುದರಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದೈವಾರಧನೆ ಬಗ್ಗೆ ಕಾಂತಾರ ಮೊದಲ ಸಿನೆಮಾ ಅಲ್ಲ , ತುಳು ಮತ್ತು ಕನ್ನಡದಲ್ಲೂ ಸಿನೆಮಾಗಳು ಬಂದಿವೆ. ಚೋಮನದುಡಿಯಲ್ಲೂ ದೈವದ ಬಗ್ಗೆ ಹೇಳಿದ್ದಾರೆ. ಆದರೆ ಕಾಂತಾರ ಸಿನೆಮಾ ಮಾಡಿದ ರೀತಿ ಜನರಿಗೆ ತಲುಪಿದೆ. ನಮ್ಮ ಉದ್ದೇಶ ಇದ್ದಿದ್ದು, ದೈವದ ಆರಾಧನೆ ಬಗ್ಗೆ ಅದರ ಶಕ್ತಿ ಬಗ್ಗೆ ತಿಳಿಸುವುದು ಮಾತ್ರ ಆಗಿತ್ತು ಎಂದರು. ಕಾಂತಾರದ ಗೆಲುವು ಎಷ್ಟು ಖುಷಿ ಕೊಡ್ತೋ, ಅಷ್ಟೇ ದುಃಖವೂ ಕೊಟ್ಟಿದೆ ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದ್ದಾರೆ. ರಿಷಬ್​ ಶೆಟ್ಟಿ ನಂದಿ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಅತ್ಯುತ್ತಮ ನಟ, ನಿರ್ದೇಶಕ ಪ್ರಶಸ್ತಿ ಪಡೆದಿದ್ದಾರೆ. ಈ ಸಮಾರಂಭದಲ್ಲಿ ಮಾತನಾಡಿದ ಅವರು, ದೈವರಾಧನೆ ಕುರಿತು ಸಾಕಷ್ಟು ತುಳು, ಕನ್ನಡ ಸಿನಿಮಾ ಬಂದಿವೆ. ಈ ಕಾಲಘಟ್ಟದಲ್ಲಿ ದೈವರಾಧನೆ ಶ್ರೇಷ್ಠತೆ ಹೇಳೋಕೆ ಈ ಸಿನಿಮಾ ಮಾಡಿದ್ದೀನಿ. ಆದರೆ ಕಾಂತಾರ ನಂತರ ದೈವದ ಹಾಡಿಗೆ ತಪ್ಪಾಗಿ ರೀಲ್ಸ್ ಮಾಡ್ತಿರೋದು ಜಾಸ್ತಿ ಆಗ್ತಿದೆ. ದಯವಿಟ್ಟು ಅದೆಲ್ಲವನ್ನೂ ಮಾಡ್ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ದೈವರಾಧನೆಗೆ ಅಪಮಾನ ಮಾಡ್ಬೇಡಿ. ದೈವರಾಧನೆ, ಪಂಜುರ್ಲಿ, ಕೋಲ ನಮ್ಮ ನೆಲಮೂಲ ಸಂಸ್ಕೃತಿ. ನಮ್ಮ ನೆಲದ ಕಥೆ ಹೇಳಬೇಕು ಅಂತಾ ಈ ಸಿನಿಮಾ ಮಾಡಿರೋದು ಎಂದು ರಿಷಬ್​ ಶೆಟ್ಟಿ ಹೇಳಿದ್ದಾರೆ.

 

Advertisement

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement